ಸಿಸಿ ರಸ್ತೆ ನಿರ್ಮಾಣಕ್ಕೆ ಮುಂಚೆ ಪೈಪ್‌ಲೈನ್ ದುರಸ್ತಿ

MAR4-HRP-CAMP-2
Published on

ಹರಪನಹಳ್ಳಿ: ಪಟ್ಟಣದ ಹರಿಹರ ರಸ್ತೆಯ ಆದಿ ಬಸವೇಶ್ವರ ದೇವಸ್ಥಾನದ ಬಳಿಯ ಆಸರೆ ಕ್ಯಾಂಪ್‌ನಲ್ಲಿ ಪುರಸಭೆಯಿಂದ ಕೈಗೆತ್ತಿಕೊಂಡಿರುವ ಸಿಸಿ ರಸ್ತೆ ಕಾಮಗಾರಿಗೂ ಮುಂಚೆ ಪೈಪ್‌ಲೈನ್ ಸರಿಪಡಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಕ್ಯಾಂಪ್‌ನಲ್ಲಿ 180 ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಿಲ್ಲ. ಕುಡಿವ ನೀರಿನ ಪೈಪ್ ರಸ್ತೆಯ ಒಂದು ಬದಿ ಇದ್ದು, ಸಂಪರ್ಕ ಬೇಕಾದವರು ರಸ್ತೆ ಒಡೆಯ ಬೇಕಾಗುತ್ತಾದೆ. ಒಳಚರಂಡಿ ಪೈಪ್‌ಲೈನ್ ಸಹ ಸಿಸಿ ರಸ್ತೆ ಮಧ್ಯೆ ಇದ್ದು, ಸಂಪರ್ಕ ಕಲ್ಪಿಸಲು ರಸ್ತೆ ಅಗೆಯಬೇಕು.

ಹೀಗಾಗಿ ಸಿಸಿ ರಸ್ತೆ ಕಾಮಗಾರಿಗಿಂತ ಮುಂಚಿತವಾಗಿ ಈ ಎಲ್ಲ ಸಂಪರ್ಕ ಕಲ್ಪಿಸಿ ಕಾಮಗಾರಿ ಆರಂಭಿಸಿದರೆ ಸಾರ್ವಜನಿಕರ ಹಣ ವ್ಯರ್ಥವಾಗುವುದಿಲ್ಲವೆಂದು ಸಾರ್ವಜನಿಕರು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ನಾಗರಾಜ ನಾಯ್ಕ ಹಾಗೂ ಸದಸ್ಯ ಮಂಜುನಾಥ ಇಜಂತಕರ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಈಗಿರುವ ಕುಡಿವ ನೀರಿನ ಪೈಪ್‌ಲೈನ್ ಬಿಟ್ಟು ಸಿಸಿ ರಸ್ತೆಯ ಎರಡು ಬದಿ ನೂತನ ಪೈಪ್‌ಲೈನ್ ಅಳವಡಿಸಲು ಕ್ರಿಯಾಯೋಜನೆ ಸಿದ್ಧಪಡಿಸಲು ಶಾಸಕರು ಸೂಚಿಸಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಸ್ಥಳೀಯ ನಿವಾಸಿಗಳಾದ ಚನ್ನಪ್ಪ, ಅಣ್ಣಪ್ಪ, ಸಣ್ಣಪ್ಪ, ಸಣ್ಣ ಅಜ್ಜಯ್ಯ, ಮಾರುತಿ, ಕೊರಚರ ಹನುಮಂತಪ್ಪ, ವೆಂಕಟೇಶನಾಯ್ಕ, ಲಕ್ಷ್ಮಮ್ಮ, ಮೈಬೂನಾಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net