ನಾರದಮುನಿ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿ

Harapanahalli Sri Naradamuni Swamy Rathotsava
ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಶ್ರೀ ನಾರದಮುನಿ ಸ್ವಾಮಿ ರಥೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
Published on

ಹರಪನಹಳ್ಳಿ: ತಾಲೂಕಿನ ಚಿಗಟೇರಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ನಾರದಮುನಿ ಸ್ವಾಮಿಯ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಮೂಲ ನಕ್ಷತ್ರದಲ್ಲಿ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ಭಕ್ತರು ನಾರದ ಮುನಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ನಾರಪ್ಪ ಎಂದೇ ಪ್ರಸಿದ್ಧಿಯಾಗಿರುವ ನಾರದಮುನಿಸ್ವಾಮಿ ರಥಕ್ಕೆ ನಾರನ್ನು ಎಸೆದು ಭಕ್ತಿ ಸಮರ್ಪಿಸಿದರು. ಭಕ್ತರು ಮೀಸಲು ಪದಾರ್ಥಗಳಾದ ಅಕ್ಕಿ ಬೆಲ್ಲ ಹಾಲು ಬಾಳೆಹಣ್ಣಿನ ವಿಶಿಷ್ಟ ಪ್ರಸಾದವನ್ನು ಮಣ್ಣಿನ ಮಡಿಕೆಯಲ್ಲಿ ತಯಾರಿಸಿ ಹರಕೆ ಒಪ್ಪಿಸಿದರು. ರಥದ ಗಾಲಿಗೆ ತೆಂಗಿನ ಕಾಯಿ ಒಡೆಯುವುದು ಹಾಗೂ ಬಾಳೆಹಣ್ಣು ಎಸೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಏ.19 ರಂದು ಸಂಜೆ ಓಕಳಿ ಉತ್ಸವ ನಡೆಯಲಿದೆ. 20 ರಂದು ಸಂಜೆ ವಿಷ್ಣು ಹಾಗೂ ಸಾವಕ್ಕನ ವಿವಾಹ ಮಹೋತ್ಸವ ನಡೆಯಲಿದೆ.

ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ, ಪ್ರಮುಖರಾದ ಶಾಮನೂರು ಬಸವರಾಜಪ್ಪ, ಒಡ್ಡಿನಹಳ್ಳಿ ಷಡಕಪ್ಪ, ಪಲ್ಲಾಗಟ್ಟೆ ನಾಗರಾಜ, ದ್ಯಾಮನಗೌಡ್ರು, ರಾಜನಗೌಡ್ರು ಹಾಗೂ ವಿಜಯನಗರ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳಿಂದ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net