ರೋಗಿಗಳ ಸೇವೆ ಪೂಜ್ಯ ಕಾರ್ಯ; ನೀಲಗುಂದ ಗುಡ್ಡದ ವಿರಕ್ತಮಠ ಸಂಸ್ಥಾನದ ಶ್ರೀ ಚನ್ನಬಸವ ಸ್ವಾಮಿಜಿ ಅನಿಸಿಕೆ

01052022 Harapanahalli blood camp
Published on

ಆರೋಗ್ಯದ ಉಚಿತ ಬೃಹತ್ ಮೇಳ ಹಾಗೂ ರಕ್ತದಾನ ಶಿಬಿರ

ಹರಪನಹಳ್ಳಿ: ರೋಗಿಗಳ ಸೇವೆ ಸಹ ಪೂಜ್ಯ ಕಾರ್ಯ ಎಂದು ನೀಲಗುಂದ ಗುಡ್ಡದ ವಿರಕ್ತಮಠ ಸಂಸ್ಥಾನದ ಶ್ರೀ ಚನ್ನಬಸವ ಸ್ವಾಮಿಜಿ ಹೇಳಿದರು.

ಪಟ್ಟಣದ ಆರ್‌ಎಸ್‌ಎನ್ ಶಾಲೆಯ ಆವರಣದಲ್ಲಿ ಭಾನುವಾರ ಎಂ.ಪಿ.ಪ್ರಕಾಶ ಸಮಾಜ ಮುಖಿ ಟ್ರಸ್ಟ್, ತಥಾಗತ್ ಹಾರ್ಟ್ ಆಸ್ಪತ್ರೆ, ಲಯನ್ಸ್ ಕ್ಲಬ್, ಎಸ್‌ಎಸ್ ಆಸ್ಪತ್ರೆ ದಿ. ಎಂ.ಪಿ.ರವೀಂದ್ರ ಜನ್ಮದಿನ ಹಾಗೂ ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಆರೋಗ್ಯದ ಉಚಿತ ಬೃಹತ್ ಮೇಳ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಎಂ.ಪಿ.ಪ್ರಕಾಶ ಸಮಾಜ ಮುಖಿ ಟ್ರಸ್ಟ್ ಅದ್ಯಕ್ಷೆ ಎಂ.ಪಿ.ವೀಣಾ ಮಾತನಾಡಿ, ನಮ್ಮ ತಂದೆ ದಿ.ಎಂ.ಪಿ.ಪ್ರಕಾಶ್ ಹಾಗೂ ಸಹೋದರರಾದ ಎಂ.ಪಿ.ರವೀಂದ್ರ ರಾಜಕಾರಣ, ಸಮಾಜ ಸೇವೆ ಹಾಗೂ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತ ಬಂದಿದ್ದರು. ಹಲವು ವರ್ಷಗಳಿಂದ ಡಾ.ಮಹಾಂತೇಶ್ ಜತೆಯಾಗಿ ಹರಪನಹಳ್ಳಿಯಲ್ಲಿ ಅನೇಕ ಕಾರ್ಯಕ್ರಮ ಮಾಡುತ್ತ ಬಂದಿದ್ದು, ಮುಂದಿನ ದಿನಗಳಲ್ಲಿ ಮುಂದುವರಿಸುವೆ ಎಂದರು.

ಡಾ.ಮಹಾಂತೇಶ್ ಚರಂತಿಮಠ ಮಾತನಾಡಿ, ನಿತ್ಯದ ಒತ್ತಡದ ಜೀವನದಲ್ಲಿ ಜನರ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬಿಪಿ, ಶುಗರ್, ಹೃದಯ ಸಂಬಂಧಿ, ಕ್ಯಾನ್ಸರ್, ಕಣ್ಣು, ಕಿವಿ ರೋಗದಂತಹ ಅನೇಕ ಕಾಯಿಲೆಗಳ ತಪಾಸಣೆಯನ್ನು ಒಂದೆ ಸೂರಿನಲ್ಲಿ ಲಭ್ಯವಾಗುವ ನಿಟ್ಟಿನಲ್ಲಿ ಆರೋಗ್ಯ ಮೇಳ ಆಯೋಜಿಸಲಾಗಿದೆ ಎಂದರು.

ರಾಜ್ಯ ಕೆಪಿಸಿಸಿ ಅಹಿಂದ ಉಪಾದ್ಯಕ್ಷ ಅಂಬಾಡಿ ನಾಗರಾಜ, ಡಾ.ಸುರೇಶ ಕಣ್ಣನ್ನವರ, ಡಾ.ನಂದಕರ್, ಡಾ.ಶ್ರೀನಿವಾಸ, ಡಾ.ಶೈಲೇಶ್, ಡಾ.ಮಹ್ಮದ್ ಬಾಗವತ್, ಡಾ.ಭಗತ್ ರಾಮ, ಡಾ.ರೂಪೇಶ, ಡಾ.ಮಹೇಶ, ಡಾ.ಶಂಕರಗೌಡ, ಡಾ.ನಾಗಾರ್ಜುನ, ಕಾಂಗ್ರೆಸ್ ಮುಖಂಡ ಬಿ.ಕೆ.ಪ್ರಕಾಶ್, ಕವಿತಾ ವಾಗೀಶ, ನಿಚ್ಚವ್ವನಹಳ್ಳಿ ಭೀಮಪ್ಪ, ಡಾ.ಗಿರೀಶ, ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net