ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ

220422 Harapanahalli Legal Awareness Program
ಹರಪನಹಳ್ಳಿಯಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಸಿವಿಲ್ ನ್ಯಾಯಾಧೀಶೆ ಫಕ್ಕಿರವ್ವ ಕೆಳಗೇರಿ ಉದ್ಘಾಟಿಸಿದರು.
Published on

ಹರಪನಹಳ್ಳಿ: ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮಣ್ಣಿಲ್ಲದೆ ಬದುಕಿಲ್ಲ, ಭವಿಷ್ಯವೂ ಇಲ್ಲ ಎಂದು ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಫಕ್ಕಿರವ್ವ ಕೆಳಗೇರಿ ಹೇಳಿದರು. ತಾಪಂ ಆವರಣದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಪಂ ಆಶ್ರಯದಲ್ಲಿ ವಿಶ್ವಭೂಮಿ ದಿನಾಚರಣೆ ಕುರಿತಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಸೇವಿಸುವ ಆಹಾರ, ತೊಡುವ ಬಟ್ಟೆ, ವಾಸಿಸುವ ಮನೆ, ಎಲ್ಲದಕ್ಕೂ ಮಣ್ಣನ್ನು ಅವಲಂಬಿಸಿದೆ. ಅದೇ ರೀತಿ ನಾವು ನಮ್ಮ ಸುಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡು ಗಿಡ-ಮರಗಳನ್ನು ಮಕ್ಕಳಂತೆ ಪೋಷಿಸಿದಾಗ ಮನುಷ್ಯ ಉತ್ತಮವಾಗಿ ಉಸಿರಾಡಲು ಸಾಧ್ಯ ಎಂದರು.

ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶಗೌಡ, ಸಾಮಾಜಿಕ ವಲಯ ಅರಣ್ಯಾಧಿಕಾರಿ ತೊಶನ್ ಕುಮಾರ್, ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ವಾಸುದೇವ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ, ಡಿ. ನಿರ್ಮಲ, ಖಲಿಲ್, ವಕೀಲರಾದ ಬಂಡ್ರಿ ಆನಂದ, ಕೆ.ಕೋಟ್ರೇಶ್, ವಾಮದೇವ, ಹನುಮಂತಪ್ಪ ಸಿ, ಶಿವನಾಗ, ರೇವಣಸಿದ್ದಪ್ಪ, ಕೋಟ್ರೇಶ್, ಬಸವರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net