ಜಾಗ ಹದ್ದುಬಸ್ತಿಗೆ ತಾಲೂಕು ಆಡಳಿತ ಕ್ರಮ

Harapanahalli Rural Labor Workers strike
ಹರಪ್ಪನಹಳ್ಳಿ ತಾಪಂ ಕಚೇರಿ ಮುಂದೆ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯಿಂದ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ತಹಸೀಲ್ದಾರ್ ಬಿ.ವಿ.ಗಿರೀಶ್ ಭೇಟಿ ನೀಡಿ ಚರ್ಚಿಸಿದರು. ಇಒ ವೈ.ಎಚ್.ಚಂದ್ರಶೇಖರ್, ನರೇಗಾ ಸಹಾಯಕ ನಿರ್ದೇಶಕ ಯು.ಸೋಮಶೇಖರ್, ವೀರಣ್ಣ ಲಕ್ಕಣ್ಣನವರ್, ನನ್ನೇಸಾಬ್ ಇತರರಿದ್ದರು.
Published on

ಹರಪನಹಳ್ಳಿ: ಸರ್ಕಾರ ನಿಗದಿ ಪಡಿಸಿರುವ ನಿವೇಶನ ಸ್ಥಳವನ್ನು ಹದ್ದು ಬಸ್ತು ಮಾಡಿಕೊಡುವುದಾಗಿ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು ಹೇಳಿದರು.

ಪಟ್ಟಣದ ತಾಪಂ ಕಚೇರಿ ಮುಂದೆ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ಕೈ ಬಿಡುವಂತೆ ಗುರುವಾರ ಮನವಿ ಮಾಡಿದರು. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಜಾಗ ಹದ್ದುಬಸ್ತಿಗೆ ಕ್ರಮವಹಿಸುವುದಾಗಿ ಭರವಸೆ ನೀಡಿದ ನಂತರ ಮುಷ್ಕರ ಕೈಬಿಡಲಾಯಿತು. ಕಾರ್ಮಿಕರು, ನಿರ್ಗತಿಕರಿಗೆ ಮನೆ ನಿರ್ಮಿಸಲು ಸರ್ಕಾರ ಹಲವಾರು ವರ್ಷಗಳ ಹಿಂದೆ ಸ್ಥಳ ನಿಗದಿ ಪಡಿಸಿದ್ದರೂ ಅಧಿಕಾರಿಗಳ ನಿರ್ಲಕ್ಷೃದಿಂದ ಮನೆ ಕಟ್ಟಿಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಬುಧವಾರದಿಮದ ಧರಣಿ ಆರಂಭಿಸಲಾಗಿತ್ತು. ಶೃತಿ, ಭಾಗ್ಯಮ್ಮ, ಸರೋಜಮ್ಮ, ಕಮಲಮ್ಮ, ಗೀತಮ್ಮ, ಕೆಂಚಮ್ಮ, ಸುಜಾತ, ರತ್ನಮ್ಮ, ದಂಡೆಮ್ಮ, ಶಾಂತಮ್ಮ, ನರಸಮ್ಮ, ರೇಖಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net