ಐದು ಸಾವಿರ ರೂ. ಮಾಸಾಶನ ನೀಡಿ

HRP Deff Protst
ಹರಪನಹಳ್ಳಿ ತಾಲೂಕು ಕಚೇರಿ ಮುಂದೆ ತಾಲೂಕು ಡೆಫ್ ಅಸೋಸಿಯೇಷನ್ ಪ್ರತಿಭಟನೆ ನಡೆಸಿತು. ತಾಲೂಕು ಅಧ್ಯಕ್ಷ ಬಿ.ಸಂತೋಷ್, ಪ್ರಮುಖರಾದ ನಾಗರಾಜ, ಕುಬೇರಾಚಾರಿ, ಮೆಹಬೂಬ್, ಗೋಣಿಬಸಪ್ಪ, ಕೊಟ್ರೇಶಪ್ಪ ಇತರರಿದ್ದರು.
Published on

ಹರಪನಹಳ್ಳಿ: ಅಂಗವಿಕಲರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ಡೆಫ್ ಅಸೋಸಿಯೇಷನ್‌ನಿಂದ ಗುರುವಾರ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ಮನವಿ ಸಲ್ಲಿಸಲಾಯಿತು.

ಭಾರತೀಯ ಸನ್ನೆ ಭಾಷೆ ತಜ್ಞ ಜಿ.ದುರುಗೇಶ್ ಮಾತನಾಡಿ, ಅಂಗವೈಕಲ್ಯ ಉಳ್ಳವರಲ್ಲಿ ಶ್ರವಣ ನ್ಯೂನತೆ ಹೊಂದಿದವರಿಗೆ ವಿವಿಧ ಸೌಲಭ್ಯ ಕಲ್ಪಿಸಬೇಕು. ದೇಶದಲ್ಲಿ ಒಟ್ಟಾರೆ 21 ತೆರನಾದ ಅಂಗವಿಕಲರಿದ್ದಾರೆ. ತಾಲೂಕಿನಲ್ಲಿ 4412 ಜನರು ಅಂಗವೈಕಲ್ಯ ಹೊಂದಿದ್ದಾರೆ.

ಇದರಲ್ಲಿ ಸರ್ಕಾರಿ ಸೌಲಭ್ಯ ಪಡೆಯುವ ಸಲುವಾಗಿ ಮಧ್ಯವರ್ತಿಗಳ ಹಾವಳಿಯಿಂದ ಸುಳ್ಳು ದಾಖಲೆಗಳನ್ನು ಪಡೆದು ನೈಜ ಫಲಾನುಭವಿಗಳಿಗೆ ದಕ್ಕಬೇಕಿದ್ದ ಅಗತ್ಯಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಇದಕ್ಕೆ ಎಸಿಡಿಪಿಒ ಹಾಗೂ ಎಂಆರ್‌ಡಬ್ಲುೃ ಮತ್ತು ವಿಆರ್‌ಡಬ್ಲುೃ ಅಧಿಕಾರಿಗಳು ಮಾತನಾಡಲು ಬಾರದ, ಕಿವಿ ಕೇಳಿಸದ ಅಂಗವಿಕಲರಿಗೆ ಸರ್ಕಾರಿ ಸೌಲಭ್ಯಗಳನ್ನು ಸರಿಯಾಗಿ ತಿಳಿಸದೆ ಅನ್ಯಾಯ ಎಸಗುತ್ತಿದ್ದಾರೆ ಎಂದರು.

ಶೇ.40ಕ್ಕೂ ಅಧಿಕ ಅಂಗವೈಕಲ್ಯ ಉಳ್ಳವರಿಗೆ ಮಾತ್ರ ಯುಡಿಐಡಿ ಕಾರ್ಡ್ ನೀಡಬೇಕು. ಆದರೆ, ಶೇ.60 ಜನರು ವಾಮಮಾರ್ಗದ ಮೂಲಕ ಸುಳ್ಳು ಪ್ರಮಾಣ ಪತ್ರ ಪಡೆದು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಹುಟ್ಟಿನಿಂದ ಮಾತುಬಾರದ, ಕಿವಿ ಕೇಳದವರಿಗೆ 1400 ರೂ. ಮಾಸಾಶನ ನೀಡುತ್ತಿದ್ದು, ಅತ್ಯಲ್ಪ ಮೊತ್ತದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಸರ್ಕಾರವು 5 ಸಾವಿರ ರೂ.ಗೆ ಮಾಸಾಶನ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net