

ಹರಪನಹಳ್ಳಿ: ಧಾರ್ಮಿಕ ಆಚರಣೆಗಳಿಂದ ಮಾನಸಿಕ ಒತ್ತಡ ನಿವಾರಣೆಯಾಗಿ ಜೀವನದಲ್ಲಿ ಶಾಂತಿ ನೆಲೆಗೊಗೊಳ್ಳಲಿದೆ ಎಂದು ರಾಮಘಟ್ಟ ಪುರವರ್ಗ ಮಠದ ಉಚ್ಚಂಗಿದುರ್ಗ ಕಟ್ಟೆಮನಿ ರಾಜಗುರು ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ತಾಲೂಕಿನ ಧಾರ್ಮಿಕ ಪ್ರಸಿದ್ಧ ಕೇಂದ್ರ ಉಚ್ಚಂಗಿದುರ್ಗ ಕೋಟೆ ಗ್ರಾಮದ ಜೀಬಿ ಆಂಜನೇಯ ಸ್ವಾಮಿ ಹಾಗೂ ಕೆಳಗೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಏರ್ಪಡಿಸಿದ್ದ ಕಲಶಾರೋಹಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿ ಧಾರ್ಮಿಕ ನೆಲೆಗಟ್ಟಿನ ಮೇಲೆ ನಿಂತಿದೆ. ಹಬ್ಬ, ಪೂಜೆ, ಶಿವಾರಾಧನೆಗಳು ಮನೋಲ್ಲಾಸ ಹೆಚ್ಚಿಸಿ ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿಯಾಗಲಿದೆ. ಉಚ್ಚಂಗಿದುರ್ಗದ ಅವಸಾನದ ಅಂಚಿನಲ್ಲಿರುವ ದೇವಸ್ಥಾನಗಳು ಅಭಿವೃದ್ಧಿಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.