50 ಎಕರೆ ಬೆಳೆ ಹಾನಿ, 11 ಮನೆಗಳಿಗೆ ಹಾನಿ

HRP-RAIN-JUL 20 (1)
Published on

ಹರಪನಹಳ್ಳಿ: ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಗಾಳಿ ಮಳೆಗೆ 11 ಮನೆಗಳು ಜಖಂಗೊಂಡು 50 ಎಕರೆ ಬೆಳೆ ಹಾನಿಯಾಗಿದೆ.

ಬಾಗಳಿಯಲ್ಲಿ 2, ಈಶಾಪುರದಲ್ಲಿ 8 ಮನೆಗಳು ಹಾಗೂ 2 ದನದ ಕೊಟ್ಟಿಗೆಗೆ ಭಾಗಶಃ ಹಾನಿಯಾಗಿದೆ. ಚಿಗಟೇರಿಯಲ್ಲಿ 1 ಮನೆ ಸಂಪೂರ್ಣ ಬಿದ್ದುಹೋಗಿದೆ.

ತಾಲೂಕಿನ ಮಾಡ್ಲಿಗೆರೆ ವೃತ್ತದಲ್ಲಿ 15 ಎಕರೆ ಮೆಕ್ಕೆಜೋಳ, 8 ಎಕರೆ ಚಂಡು ಹೂವು, ಕೂಲಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 20 ಎಕರೆ ಮೆಕ್ಕೆಜೋಳ ಹಾಗೂ ರಾಗಿ, 5 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಹಾರಕನಾಳು ತಾಂಡಾ, ಈಶಾಪುರ ಮತ್ತು ಚೆನ್ನಹಳ್ಳಿಯಲ್ಲಿ ಚಂಡುಹೂವು ಮತ್ತು ಮೆಕ್ಕೆಜೋಳ ಸೇರಿ ಅಂದಾಜು 50 ಎಕರೆಗೂ ಅಧಿಕ ಬೆಳೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ಎಷ್ಟು ಮಳೆ: ತಾಲೂಕಿನಲ್ಲಿ ಸರಾಸರಿ 37.54 ಮಿಮೀ ಮಳೆಯಾಗಿದೆ. ಹರಪನಹಳ್ಳಿ-42.8 ಮಿ .ಮೀ, ಅರಸಿಕೇರಿ-6.2, ಚಿಗಟೇರಿ-50.6, ಹಿರೇಮೇಗಳಗೆರೆ-3.2, ಉಚ್ಚಂಗಿದುರ್ಗ-20.6, ತೆಲಿಗಿ-49.4, ಹಲುವಾಗಲು-90 ಮಿ.ಮೀ. ಮಳೆಯಾದ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net