ಭಕ್ತರಿಗೆ ಮೂಲಸೌಕರ್ಯ ಒದಗಿಸಿ

harapanhalli dc
ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಭಾನುವಾರ ಭೇಟಿ ನೀಡಿ, ಗಣಕೀಕೃತ ರಸೀದಿ ನೀಡುವುದನ್ನು ಪರಿಶೀಲಿಸಿದರು.
Published on

ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗದ ಹಾಲಮ್ಮ ತೋಪು, ಉತ್ಸವಾಂಬಾ ಹಾಗೂ ಉಚ್ಚೆಂಗೆಮ್ಮನ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಭಾನುವಾರ ಭೇಟಿ ನೀಡಿ, ಮೂಲಸೌಕರ್ಯ ಪರಿಶೀಲಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಶೌಚಗೃಹ ಅವಶ್ಯಕತೆಯಿದ್ದು, ಕೂಡಲೇ ನಿರ್ಮಾಣ ಮಾಡಬೇಕು. ಹಾಲಮ್ಮ ತೋಪುವಿನಲ್ಲಿಯೂ ವಿದ್ಯುತ್ ದೀಪ, ಶೌಚಗೃಹಗಳ ಅವಶ್ಯಕತೆಯಿದ್ದು, ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲ ದೇವಸ್ಥಾನಗಳಲ್ಲಿ ಗಣಕೀಕೃತ ರಸೀದಿ ಪದ್ಧತಿಯು ಪಾರದರ್ಶಕತೆಯಿಂದ ಕೂಡಿದ್ದು, ಇದರಿಂದ ಆದಾಯದಲ್ಲಿ ದ್ವಿಗುಣವಾಗಿರುವುದನ್ನು ಪ್ರಶಂಸಿದರು. ಇದೇ ಅಗತ್ಯ ಸೌಲಬ್ಯ ಕಲ್ಪಿಸುವಂತೆ ಡಿಸಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net