ಬಡವರಿಗಾಗಿ 1156 ಮನೆ ನಿರ್ಮಾಣ: ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಜಿ.ಕರುಣಾಕರ ರೆಡ್ಡಿ

191221 Housing construction works in Kurubgeri
ಹರಪನಹಳ್ಳಿಯ ಕುರುಬಗೇರಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕೈಗೊಂಡಿರುವ ವಸತಿ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಕರುಣಾಕರರೆಡ್ಡಿ ಚಾಲನೆ ನೀಡಿದರು.
Published on

ಹರಪನಹಳ್ಳಿ: ಪಟ್ಟಣವನ್ನು ಗುಡಿಸಲು ಮುಕ್ತಗೊಳಿಸಲು ಸರ್ಕಾರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1,156 ಮನೆಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

ಪಟ್ಟಣದ ಕುರುಬಗೇರಿಯಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ ಕೈಗೊಂಡಿರುವ ವಸತಿ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ವಸತಿ ಯೋಜನೆಗಾಗಿ ಸರ್ಕಾರ 77.55 ಕೋಟಿ ಮಂಜೂರು ಮಾಡಿದೆ. ಪ್ರತಿ ಮನೆ ನಿರ್ಮಾಣಕ್ಕೆ 7.50 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಎಸ್ಸಿ, ಎಸ್ಟಿ, ಹಿಂದುಳಿದ ಮತ್ತು ಇತರ ವರ್ಗಗಳ ಫಲಾನುಭವಿಗಳು ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು. ಇ.ಇ.ಆನಂದಪ್ಪ, ಕಾರ್ಯಪಾಲಕ ಇಂಜಿನಿಯರ್ ಕಪನಿಗೌಡ ಬಿ.ಎಂ, ಎಇಇ ಕೃಷ್ಣ ರೆಡ್ಡಿ ಬಿ. ಎಇ ಶಿವಕುಮಾರ್ ಎಸ್.ಜೆ, ಬಿಜೆಪಿ ಮುಖಂಡರಾದ ಎಂ.ಪಿ.ನಾಯಕ್, ನಿಟ್ಟೂರು ಸಣ್ಣ ಹಾಲಪ್ಪ ಬೂದಿ ನವೀನ್, ಸಂತೋಷ್, ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net