

ಹರಪನಹಳ್ಳಿ: ತಾಲೂಕು ಪಿಕಾರ್ಡ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅರಸೀಕೆರೆ ಕ್ಷೇತ್ರದ ಪಿ.ಕೆ.ಮಹಾದೇವಪ್ಪ, ಉಪಾಧ್ಯಕ್ಷರಾಗಿ ಹಲವಾಗಲು ಕ್ಷೇತ್ರದ ಎ.ಬಸವರಾಜಪ್ಪ ಅವಿರೋಧ ಆಯ್ಕೆಯಾದರು.
ಪಿಎಲ್‌ಡಿ ಬ್ಯಾಂಕಿನ 14 ಸದಸ್ಯರನ್ನು ಹೊಂದಿದ್ದು, ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ಕೆ.ಮಹಾದೇವಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎ.ಬಸವರಾಜಪ್ಪ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿ, ತಹಸೀಲ್ದಾರ್ ಈಶ್ವರ ಕುಮಾರ ಖಂಡು ಘೋಷಿಸಿದರು.
ನೂತನ ಅಧ್ಯಕ್ಷ ಪಿ.ಕೆ.ಮಹಾದೇವಪ್ಪ ಮಾತನಾಡಿ, ಸದಸ್ಯರು, ಹಿರಿಯರ ಸಹಕಾರದೊಂದಿಗೆ ಬ್ಯಾಂಕ್ ಸರ್ವಾಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.