ನೇಪಾಳದಲ್ಲಿ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದ ಸೌಂದರ್ಯ

161122 Harpanahalli Soundarya participated in India Throwball Sports
ಹರಪನಹಳ್ಳಿ ನೇಪಾಳ ದೇಶದಲ್ಲಿ ಥ್ರೋಬಾಲ್ ಕ್ರೀಡೆಯಲ್ಲಿ ಭಾಗವಹಿಸಿ ಪ್ರಥಮಸ್ಥಾನ ಪಡೆದ ಭಾರತದ ತಂಡ.
Published on

ಹರಪನಹಳ್ಳಿ: ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಥ್ರೋಬಾಲ್ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ದೇಶದ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ತಾಲೂಕಿನ ತಾವರಗುಂದಿ ಗ್ರಾಮದ ಕ್ರೀಡಾಪಟು ಸೌಂದರ್ಯ.

ನ.12ರಿಂದ 14ರವರೆಗೆ ನೇಪಾಳ ದೇಶದಲ್ಲಿ ನಡೆದ ಥ್ರೋಬಾಲ್ ಕ್ರೀಡೆಯಲ್ಲಿ ಭಾರತ ತಂಡದ ಜೊತೆಗೆ ಗುರುತಿಸಿಕೊಂಡು ನೇಪಾಳ ದೇಶದ ವಿರುದ್ಧ ಸೆಣಸಾಡಿ ವಿಜೇತರಾಗುವ ಮೂಲಕ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ ಪಡೆದಿದ್ದಾರೆ.

ಭಾರತದ ಥ್ರೋಬಾಲ್ ತಂಡದಲ್ಲಿ ಸೌಂದರ್ಯ, ಧನ್ಯಶ್ರೀ, ಶಮಿತಾ, ಸಾಯಿ ರಶ್ಮಿ, ಚಿತ್ರಕಲಾ, ಅಂಜುಮ್, ರೇಖಾ ಇವರು ಪ್ರತಿನಿಧಿಸಿದ್ದಾರೆ. ಸ್ಥಳೀಯರ ನೇರವಿನಿಂದ ನೇಪಾಳದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿರುವ ಇವರ ಸಾಧನೆಗೆ ತಾಲೂಕಿನ ವಿವಿಧ ಗಣ್ಯರು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net