ಮುಜರಾಯಿ ದೇಗುಲಗಳ ಅರ್ಚಕರಿಗೆ ದಿನಸಿ ಕಿಟ್

HRP-GOKARN-JUL 04
Published on

ಹರಪನಹಳ್ಳಿ: ಮುಜರಾಯಿ ಇಲಾಖೆಗೆ ಒಳಪಟ್ಟಿರುವ ತಾಲೂಕಿನ 59 ದೇವಸ್ಥಾನಗಳ ಅರ್ಚಕರಿಗೆ ಉಪವಿಭಾಗಾಧಿಕಾರಿ ಎ.ಕೆ. ಪ್ರಸನ್ನಕುಮಾರ ಶನಿವಾರ ದಿನಸಿ ಕಿಟ್ ವಿತರಿಸಿದರು.

ಪಟ್ಟಣದ ಶ್ರೀ ಗೋಕರ್ಣೇಶ್ವರ ದೇವಸ್ಥಾನ ಆವರಣದಲ್ಲಿ ತಾಲೂಕಿನ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್‌ಡೌನ್ ಪರಿಹಾರದ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ವೇಳೆ ದೇಗುಲಗಳನ್ನು ಬಂದ್ ಮಾಡಿದ್ದರಿಂದ ಅರ್ಚಕರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಅವರಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಆಹಾರ ಕಿಟ್ ನೀಡಲಾಗಿದೆ ಎಂದು ತಿಳಿಸಿದರು.

ದೇಗುಲಕ್ಕೆ ಬರುವ ಭಕ್ತರೊಂದಿಗೆ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಿಯೇ ಪೂಜಾ ಕಾರ್ಯಗಳನ್ನು ನೆರವೇರಿಸಬೇಕೆಂದು ಅರ್ಚಕರಿಗೆ ಸೂಚಿಸಿದರು.

ಗೋಕರ್ಣೇಶ್ವರ ದೇವಸ್ಥಾನದ ಅರ್ಚಕ ಸತೀಶ್‌ಭಟ್, ಮುಖಂಡರಾದ ಎಂ. ಪ್ರಶಾಂತ, ಎಂ. ಮಂಜುನಾಥ, ಹನುಮಂತ ಜೈನ್, ಟೈಲರ್ ರಮೇಶ್, ಶ್ಯಾವಳಗಿ ತಿಪ್ಪೇಶ್, ಮುಜರಾಯಿ ಇಲಾಖೆಯ ಶಾಂತಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net