ಎಂ.ಪಿ.ರವೀಂದ್ರ ಪ್ರತಿಷ್ಠಾನ ವಿಶ್ವ ಮಹಿಳಾ ದಿನಾಚರಣೆ - ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ

080322 Harapanahalli Womens Day
ಹರಪನಹಳ್ಳಿ ಕಾಂಗ್ರೆಸ್ ಭವನದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನದಿಂದ ಮಂಗಳವಾರ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಸನ್ಮಾನಿಸಲಾಯಿತು.
Published on

ಹರಪನಹಳ್ಳಿ: ಮಹಿಳೆ ಏನೆಲ್ಲಾ ಸಾಧನೆ ಮಾಡಬಹುದು ಎನ್ನುವುದಕ್ಕೆ ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಮದರ್‌ಥೆರೆಸಾ, ಲತಾಮಂಗೇಶ್ಕರ್, ಗಂಗೂಬಾಯಿ ಹಾನಗಲ್, ಕಲ್ಪನಾ ಚಾವ್ಲಾ, ಇಂದಿರಾಗಾಂಧಿಯಂತಹ ಅನೇಕ ಸಾಧಕಿಯರ ಸಾಕ್ಷಿಯಾಗಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅಂಗವಿಕಲ ಮತ್ತು ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಸನ್ಮಾನಿಸಿ ಮಂಗಳವಾರ ಮಾತನಾಡಿದರು.

ಖೋಖೋದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ನಂದಿನಿ ಒಡೆಯರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಓದು, ಕ್ರೀಡೆಯಲ್ಲಿ ಸಾಧನೆ ಮಾಡಿದ್ದೇನೆ. ಕ್ರೀಡೆ ಎಂದರೆ ಅಸಡ್ಡೆ ಬೇಡ, ಪಾಲಕರು ಮಕ್ಕಳಿಗೆ ಪಾಠದ ಜತೆಗೆ ಆಟಕ್ಕೂ ಪ್ರೋತ್ಸಾಹ ನೀಡಬೇಕು ಎಂದರು.

ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ರತ್ನಮ್ಮ ಸೋಮಣ್ಣ, ಕವಿತಾ ಸುರೇಶ, ಗ್ರಾಪಂ ಸದಸ್ಯೆ ರೇಣುಕಾ ಮಂಜುನಾಥ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ, ಮೈದೂರು ರಾಮಣ್ಣ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಶಿವರಾಜ, ಪ್ರಸಾದ್ ಕಾವಡಿ, ಎನ್‌ಎಸ್‌ಯುಐ ಅಧ್ಯಕ್ಷ ಶ್ರೀಕಾಂತಯಾದವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net