42 ವರ್ಷದ ಬಳಿಕ ಮಾಡಲಗೇರಿ ಕೆರೆ ಭರ್ತಿ; ಹಟ್ಟಿಗೌಡ್ರು ಎಂ.ಪಿ.ನಾಯ್ಕರಿಂದ ಗಂಗಾಪೂಜೆ, ಬಾಗಿನ ಅರ್ಪಣೆ

23102022 madalageri bagina
Published on

ಹರಪನಹಳ್ಳಿ: ತಾಲೂಕಿನ ಮಾಡಲಗೇರಿ ಮತ್ತು ತಾಂಡಾ ವ್ಯಾಪ್ತಿಯ ಕೆರೆಗೆ ಗ್ರಾಮದ ಮುಖಂಡ ಹಟ್ಟಿಗೌಡ್ರು ಎಂ.ಪಿ. ನಾಯ್ಕ ಗಂಗಾಪೂಜೆ ನೇರವೇರಿಸಿ ಭಾನುವಾರ ಬಾಗಿನ ಅರ್ಪಿಸಿದರು.

ಬಳಿಕ ಮಾತನಾಡಿದ ಅವರು, 42 ವರ್ಷಗಳ ಹಿಂದೆ ಬಿದ್ದಿದ್ದ ಕೆರೆ ಕೋಡಿ ಈಗ ಬಿದ್ದಿದೆ. ಈ ವರ್ಷ ಉತ್ತಮ ಮಳೆಯಾಗಿ ತಾಲೂಕಿನ ಹಲವಾರು ಕೆರೆ ಕಟ್ಟೆಗಳಿಗೆ ನೀರು ಬಂದು ಹಳ್ಳ ಕೊಳ್ಳಗಳು ಹರಿದಿದ್ದರಿಂದ ಕುಡಿವ ನೀರಿನ ಅಭಾವ ನಿಗಿದಂತಾಗಿದೆ ಎಂದರು.

ಮಾಡಲಗೇರಿ ಗ್ರಾಪಂ ಸದಸ್ಯ ಎಲ್. ಹಾಲೇಶ್‌ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಚನ್ನವೀರ ನಾಯ್ಕ, ಗುತ್ತಿಗೆದಾರ ವಿ. ಮಲ್ಲೇಶ್ ನಾಯ್ಕ, ಡಾವೂ, ಗೇಮ್ಯಾನಾಯ್ಕ, ಭಜನಿ ಸಂಘದ ಅಧ್ಯಕ್ಷ ಕೊಟ್ರೇಶ್ ನಾಯ್ಕ, ಕಾರಬಾರಿ ಯಂಕ್ಯಾನಾಯ್ಕ, ಲಂಕೇಶ್ ನಾಯ್ಕ, ಎಂ. ನಾಗೇಂದ್ರ ನಾಯ್ಕ, ಆರ್. ಮಲ್ಲೇಶ್ ನಾಯ್ಕ, ಡಿ. ರಮೇಶ್ ನಾಯ್ಕ, ವಿ. ಗಣೇಶ್ ನಾಯ್ಕ, ಮಾಡಲಗೇರಿ ಹನುಮಂತಪ್ಪ, ರಾಜಪ್ಪ, ಚಂದ್ರನಾಯ್ಕ, ಪೂಜಾರಿ ಶೇಖರನಾಯ್ಕ, ಎಂ.ಎಸ್. ನಾಯ್ಕ, ಓಮ್ಯಾನಾಯ್ಕ, ಜಗದೀಶ್ ನಾಯ್ಕ, ಶಂಕ್ರನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net