ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ

hrp-1
ಹರಪನಹಳ್ಳಿಯಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ದಾಖಲಾತಿ ಆಂದೋಲನಾ ಜಾಥಾದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಕರಪತ್ರ ಬಿಡುಗಡೆಗೊಳಿಸಿದರು. ಕ್ಷೇತ್ರಸಮನ್ವಯಾಧಿಕಾರಿ ಹೊನ್ನತ್ತೆಪ್ಪ, ಸಿಆರ್‌ಗಳಾದ ಪಿ.ಸಲೀಂ, ವೀರಭದ್ರಪ್ಪ ಬೆಳ್ಳುಳ್ಳಿ, ಶಿಕ್ಷಕರು ಇದ್ದರು.
Published on

ಹರಪನಹಳ್ಳಿ: ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳು ಯಾವುದರಲ್ಲೂ ಹಿಂದೆ ಇಲ್ಲ. ಆದ್ದರಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸಲಹೆ ನೀಡಿದರು.

ಪಟ್ಟಣದ ಐ.ಬಿ.ವೃತ್ತದಲ್ಲಿ ಶಿಕ್ಷಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ದಾಖಲಾತಿ ಆಂದೋಲನಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇವಲ ದಾಖಲಾತಿಗೆ ಸೀಮಿತವಾಗದೆ ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಿ.

ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಬಿಸಿಯೂಟ ಸೇರಿದಂತೆ ಅನೇಕ ಸೌಕರ್ಯ ನೀಡುತ್ತಿದೆ. ಅವುಗಳ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ವಿಷಯವಾರು ನುರಿತ ಶಿಕ್ಷಕರಿಂದ ಬೋಧನೆ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ, ವಿದ್ಯಾರ್ಥಿ ವೇತನ, ಬಿಸಿಯೂಟ, ಕ್ಷೀರಭಾಗ್ಯ, ರಾಗಿ ಮಾಲ್ಟ್, ಮೊಟ್ಟೆ, ಉಚಿತ ಶೂ-ಸಾಕ್ಸ್ ವಿತರಣೆ ಹೀಗೆ ಅನೇಕ ಸೌಲಭ್ಯಗಳಿವೆ. ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಎಂದು ಕೋರಿದರು.

ಶಿಕ್ಷಕರಾದ ಅರ್ಜುನ್ ಪರುಸಪ್ಪ, ಬಂದೋಳ ಸಿದ್ದೇಶ, ರಾಜಶೇಖರ್, ಚಂದ್ರಶೇಖರ, ಸುರೇಶ, ನಾಗರಾಜ, ನಿರ್ಮಲಾ ಕುಮಾರಿ, ಗೀತಾಬಾಯಿ, ರೇಣುಕಾ, ಉಮಾದೇವಿ, ಸಿ.ನಾಗಪ್ಪ, ಶಫೀವುಲ್ಲಾ ಸವಣೂರು, ಪಿ.ಸುಬ್ಬಣ್ಣ, ಎಂ.ವೀರೇಶ, ಎಚ್.ಬಿ.ಮಲ್ಲೇಶ್, ಬಿ.ರಾಜಶೇಖರ, ಎಸ್.ಗೌರಮ್ಮ, ಕಾಡಜ್ಜಿ ಮಂಜುನಾಥ, ಭೀಮರಾಜ, ಬಿ.ಮಹಾಲಕ್ಷ್ಮೀ, ಎಸ್.ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net