

ಹರಪನಹಳ್ಳಿ: ವಿದ್ಯಾರ್ಥಿಗಳಿಗೆ ಕೊಡಬೇಕಾದ ಲ್ಯಾಪ್‌ಟಾಪ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಉನ್ನತ ಶಿಕ್ಷಣ ಸಚಿವರೂ ಶಾಮೀಲಾಗಿದ್ದಾರೆ. ಕೂಡಲೇ ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ತಾಲೂಕು ಎನ್ ಎಸ್‌ಯುಐ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಎನ್‌ಎಸ್‌ಯುಐ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ಶ್ರೀಕಾಂತ್ ಯಾದವ್, ಎನ್‌ಎಸ್‌ಯುಐ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಭೋವಿ ಶಿವರಾಜ್, ಹರ್ಷ, ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಹರೀಶ್ ನಾಯ್ಕ, ಕಾರ್ಯದರ್ಶಿ ಮಂಜುನಾಥ, ವೆಂಕಟೇಶ, ತಿಮ್ಮನಾಯ್ಕ, ಗುರು, ಮನು, ಪ್ರಕಾಶ, ಕುಮಾರ್ ಇದ್ದರು.