ಕೈವಾರ ತಾತಯ್ಯ ಜಯಂತಿ ಸಂಪನ್ನ

Harapanahalli Kaivara Tatayya Jayanti
ಹರಪನಹಳ್ಳಿ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಕೈವಾರ ತಾತಯ್ಯ ಅವರ ಜಯಂತಿ ಆಚರಿಸಲಾಯಿತು.
Published on

ಹರಪನಹಳ್ಳಿ: ಪ್ರತಿಯೊಬ್ಬರೂ ಕೈವಾರ ತಾತಯ್ಯ ಅವರ ಆದರ್ಶ, ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಹೇಳಿದರು.

ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಮಂಗಳವಾರ ಶ್ರೀ ಯೋಗಿ ನಾರೇಯಣ ಯತೀಂದ್ರ(ಕೈವಾರ ತಾತಯ್ಯ)ರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ನಾವೆಲ್ಲರೂ ಸಮಾಜದ ಒಳಿತು, ಸುಸ್ಥಿತಿಗೆ ಶ್ರಮಿಸಬೇಕು. ಪಾಲಕರು ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಶಿಕ್ಷಣವನ್ನು ಕೊಡಿಸಲು ಮುಂದಾಗಬೇಕು ಎಂದರು.

ತಹಸೀಲ್ದಾರ್ ಶಿವಕುಮಾರ ಬಿರಾದಾರ್, ಪುರಸಭೆ ಸದಸ್ಯೆ ತಾರಾ ಹನುಮಂತಪ್ಪ, ಬಲಿಜ ಸಮಾಜದ ತಾಲೂಕು ಅಧ್ಯಕ್ಷ ಜಿ.ನಾಗಭೂಷಣ, ಪವನಕುಮಾರ, ಸಾಗರ, ವೆಂಕಟೇಶ, ಮಂಜುನಾಥ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net