ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆ ಆಗದಿರಲಿ

Harapanhaalli Hospital
ಹರಪನಹಳ್ಳಿ ತಾಲೂಕು ಆಸ್ಪತ್ರೆಗೆ ಮಂಗಳವಾರ ಸಿವಿಲ್ ನ್ಯಾಯಾಧೀಶ ಎಸ್.ಪಿ.ಮನು ಶರ್ಮ ಭೇಟಿ ನೀಡಿ, ಪರಿಶೀಲಿಸಿದರು. ಹಿರಿಯ ಶುಶ್ರೂಷಕಿ ರೇಣುಕಮ್ಮ ಮೆಟ್ರಾನ್, ಪ್ರಮುಖರಾದ ವೆಂಕಟೇಶ್ ಬಾಗಲಾರ್, ಬಸವರಾಜ್ ಎನ್, ಕೊಟ್ರೇಶ್ ಬಾಗಳಿ, ಫಕ್ಕೀರಪ್ಪ ಸುಣಗಾರ ಇತರರಿದ್ದರು.
Published on

ಹರಪನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಿವಿಲ್ ನ್ಯಾಯಾಧೀಶ ಎಸ್.ಪಿ. ಮನು ಶರ್ಮ ಭೇಟಿ ನೀಡಿ ಪರಿಶೀಲಿಸಿದರು.

ಅಸ್ಪತ್ರೆಯಲ್ಲಿ ಸ್ವಚ್ಛತೆ, ರೋಗಿಗಳ ಕೊಠಡಿಗಳಿಗೆ ಭೇಟಿ ನೀಡಿ ಹೆರಿಗೆ ಕೋಣೆಯ ಸ್ವಚ್ಛತೆ ಹಾಗೂ ತಾಂತ್ರಿಕ ಉಪಕರಣಗಳನ್ನು ಪರಿಶೀಲಿಸಿದರು. ಅಲ್ಲದೆ ಚುಚ್ಚುಮದ್ದು ಕೊಠಡಿ, ಲ್ಯಾಬ್, ತುರ್ತು ಚಿಕಿತ್ಸಾ, ನಿಗಾ ಘಟಕ, ಅಡುಗೆ ಕೋಣೆ, ಡಯಾಲಿಸಿಸ್ ಘಟಕ, ಟುಬೆಕ್ವಮಿ ವಾರ್ಡ್, ದಂತ ಆರೋಗ್ಯಾಧಿಕಾರಿ ವಾರ್ಡ್‌ಗಳ ಪರಿಶೀಲಿಸಲಾಯಿತು.

ನಂತರ ಆರೋಗ್ಯಾಧಿಕಾರಿ ಶಂಕರ್ ನಾಯ್ಕ ಅವರೊಂದಿಗೆ ಸಮಾಲೋಚನೆ ನಡೆಸಿ ಯಾವುದೇ ಮೂಲಸೌಲಭ್ಯಗಳ ಕೊರತೆಯಾಗದಂತೆ ನಿಗಾವಹಿಸಿ, ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಔಷಧಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆಯಲ್ಲಿ ಸಿಟಿ ಸ್ಕಾೃನ್ ಇಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯಾಧಿಕಾರಿ ಶಂಕರ್ ನಾಯ್ಕ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net