ಗುಳೇದ ಲಕ್ಕಮ್ಮ ಜಾತ್ರೆಗೆ ಸಿದ್ಧತೆ

Karunakar Reddy Harapanahalli
SLM
Published on

ಹರಪನಹಳ್ಳಿ: ತಾಲೂಕಿನ ಹುಲಿಕಟ್ಟಿ ಗ್ರಾಮದ 51 ಗುಳೇದ ಲಕ್ಕಮ್ಮ ಜಾತ್ರಾ ಮಹೋತ್ಸವ ಜ.3ರಿಂದ 5ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು. ಹುಲಿಕಟ್ಟಿ ಗ್ರಾಮಸ್ಥರು, ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ಜ.3ರಂದು ಮಂಗಳವಾರ ರಾತ್ರಿ 10 ಗಂಟೆಯಿಂದ ದೇವಿಯು ಗಂಗೆಗೆ ಹೋಗಿ ಗದ್ದುಗೆಗೊಳ್ಳುವ ಉತ್ಸವ, 4ರಂದು ಡೊಳ್ಳಿನ ಮಜಲು, ಕೋಲಿನ ಮೇಳ, ಎತ್ತಿನ ಮೇರವಣಿಗೆ, 5ರಂದು ಸಂಜೆ 4ಗಂಟೆಗೆ ಗದ್ದುಗೆಯಿಂದ ಹುಲಿಕಟ್ಟಿ ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಲಿದೆ ಎಂದರು.

ಸಾರಿಗೆ ಸಂಸ್ಥೆ ಜಾತ್ರೆಗಾಗಿ 5 ಬಸ್‌ಗಳನ್ನು ಓಡಿಸಬೇಕು. ಗ್ರಾಪಂ ಆಡಳಿತ ಸ್ವಚ್ಛತೆ ನೋಡಿಕೊಳ್ಳಬೇಕು. ಸುಗಮ ಸಂಚಾರಕ್ಕೆ ಏಕಮುಖ ರಸ್ತೆ ವ್ಯವಸ್ಥೆ ಮಾಡಿ, ರಸ್ತೆ ದುರಸ್ತಿ ಮಾಡಿಸಬೇಕು. 9 ಸಾವಿರ ಲೀಟರ್ ಸಾಮರ್ಥ್ಯ ವಿರುವ ಟ್ಯಾಂಕರ್, ವೈದ್ಯಕೀಯ ಸೇವೆ ಕಲ್ಪಿಸಬೇಕು ಎಂದರು.

ಪ್ರಮುಖ ಗ್ರಾಮಸ್ಥರಾದ ಹುಲಿಕಟ್ಟಿ ಚಂದ್ರಪ್ಪ, ಭಾಷುಸಾಬ್, ಬಣಕಾರ ಗಂಗಾಧರಪ್ಪ, ಪಿ.ಹಾಲೇಶ, ಪಿ.ಲಕ್ಕೇಶ, ಓಮ್ಯಪ್ಪ, ಕುಂಬಾರ ನಾಗೇಂದ್ರಪ್ಪ, ಡಿವೈಎಸ್‌ಪಿ ಹಾಲಮೂರ್ತಿ, ಎ.ಇಇಗಳಾದ ಸತೀಶ ಪಾಟೀಲ್, ನಾಗಪ್ಪ, ಜಯ್ಯಪ್ಪ, ಸಿದ್ದರಾಜು, ಪಿಡಿಓ ಚಂದ್ರನಾಯ್ಕ, ದಾದಾಪೀರ, ವಿನಯ ಸಾಲಿಮಠ, ಹಾಲಸ್ವಾಮಿ, ಪಿಎಸ್‌ಐ ಸಿ.ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net