

ಹರಪನಹಳ್ಳಿ: ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಕಾಮಗಾರಿಯನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಣ್ಣನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯ ಗುತ್ತಿಗೆದಾರರು ನಾಲ್ಕು ಕೋಟಿ ರೂ. ಬಾಕಿ ಹಣ ಬರಬೇಕಿದೆ ಎಂಬುದು ಸೇರಿದಂತೆ ಇತರೆ ಕಾರಣ ನೀಡಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಈ ಕುರಿತು ಶಾಸಕಿ ಎಂ.ಪಿ.ಲತಾ ಅವರು ಸಿಎಂ ಗಮನಕ್ಕೂ ತಂದಿದ್ದಾರೆ. ಇನ್ನೊಮ್ಮೆ ಗುತ್ತಿಗೆದಾರರ ಬಳಿ ಮಾತನಾಡುವೆ. ಸರಿಹೋಗದಿದ್ದರೆ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭಾ ಅಧ್ಯಕ್ಷೆ ಎಂ. ಪಾತೀಮಾಭಿ, ಗೌತಮಪ್ರಭು, ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಪುರಸಭಾ ಸದಸ್ಯರಾದ ಲಾಟಿದಾದಾಪೀರ, ಜಾಕೀರ ಹುಸೇನ್, ಜಯಲಕ್ಷ್ಮೀ, ಗಾಯಿತ್ರಮ್ಮ, ಜಾಯಿದ್, ಗುಂಡಗತ್ತಿ ಕೊಟ್ರಪ್ಪ, ಎಂ.ವಿ.ಕೃಷ್ಣ, ಮತ್ತೂರು ಬಸವರಾಜ, ಪ್ರಸಾದ್ ಕಾವಡಿ, ಶಮಿ, ಶಶಿಕುಮಾರನಾಯ್ಕ ಹಾಗೂ ಇತರರಿದ್ದರು.