ಪಾರ್ಕ್‌ನಲ್ಲಿ ಗಿಡ ನೆಟ್ಟು ವನ ಮಹೋತ್ಸವ

HRP-GIDA-JUL 01
Published on

ಹರಪನಹಳ್ಳಿ: ಪಟ್ಟಣದ ನಟರಾಜ ಬಡಾವಣೆಯ ಜೆಸಿ ಪಾರ್ಕ್‌ನಲ್ಲಿ ಗಿಡ ನೆಡುವ ಮೂಲಕ ವನ ಮಹೋತ್ಸವಕ್ಕೆ ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿ ಶಾಮಿಯಾನ ದೀಪಾಲಂಕಾರ ಮತ್ತು ಧ್ವನಿವರ್ಧಕ ಸಂಯೋಜಕರ ಕ್ಷೇಮಾಭಿವೃದ್ಧಿ ಒಕ್ಕೂಟದ ತಾಲೂಕು ಘಟಕ ತಮ್ಮ ವೃತ್ತಿ, ಒತ್ತಡವನ್ನು ಬದಿಗಿಟ್ಟು ಗಿಡ ನೆಟ್ಟು, ವನ ಮಹೋತ್ಸವ ಆಚರಿಸುವ ಮೂಲಕ ಪರಿಸರ ಕಾಳಜಿಗೆ ಮುಂದಾಗಿರುವುದು ಪ್ರಸಂಶಾರ್ಹ. ಪ್ರತಿಯೊಬ್ಬರಲ್ಲೂ ಈ ಕಾಳಜಿ ಬೇಕು ಎಂದರು.

ಕ್ಷೇಮಾಭಿವೃದ್ಧಿ ಒಕ್ಕೂಟದ ತಾಲೂಕು ಅಧ್ಯಕ್ಷ ಅಬ್ದುಲ್‌ಕರೀಂ ಮಾತನಾಡಿ, ರಾಜ್ಯ ಸಮಿತಿ ಆದೇಶದಂತೆ ತಾಲೂಕಲ್ಲಿ ವನ ಮಹೋತ್ಸವ ಹಮ್ಮಿಕೊಂಡಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಇಮ್ರಾನ್, ಕೆಜಿಎನ್ ಸಂಘಟನಾ ಕಾರ್ಯದರ್ಶಿ ಎಂ.ಮಾರುತಿ, ಉಪಾಧ್ಯಕ್ಷ ಚಮನ್, ಖಜಾಂಚಿ ಕರಿಬಸಪ್ಪ ಮೈದೂರು, ಬಾಬಣ್ಣ, ಜೆಸಿ ಅಧ್ಯಕ್ಷ ವಿಶ್ವನಾಥ್, ಪ್ರಸನ್ನಕುಮಾರ್, ಸೈಫುಲ್ಲಾ, ಬುಡೇನ್, ಶೇಷಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net