

ಹರಪನಹಳ್ಳಿ: ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುತ್ತಿರುವ ಪರಿಸರ ಮತ್ತು ಆರೋಗ್ಯ ಸಂಕಷ್ಟವನ್ನು ಎದುರಿಸುವ ಅಗತ್ಯವು ಜಾಗತಿಕ ಒಗ್ಗಟ್ಟಿನ ಅಭಿವ್ಯಕ್ತಿಯಾಗಿದೆ ಎಂದು ಜೀವಶಾಸ್ತ್ರ ಶಿಕ್ಷಕ ಜಯಮಾಲತೇಶ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಗುರುವಾರ ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ 400 ಮಿಲಿಯನ್ ಟನ್‌ಗು ಅಧಿಕ ಪ್ಲಾಸ್ಟಿಕ್ ಉತ್ಪಾದನೆಯಾಗಿ, 11 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರ ಸೇರುತ್ತಿದೆ ಎಂಬ ಅಂದಾಜು ಇದೆ. ಈ ಕಾರಣದಿಂದ ಪ್ಲಾಸ್ಟಿಕ್ ಮಾಲಿನ್ಯ ನಮ್ಮ ಕಾಲದ ಗಂಭೀರ ಪರಿಸರ ಸಮಸ್ಯೆಯಾಗಿದೆ.
ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು ಪ್ರಸಕ್ತ ವಿಶ್ವ ಪರಿಸರ ದಿನದ ಥೀಮ್ ಆಗಿದ್ದು, ಉದ್ದೇಶ ವ್ಯಕ್ತಿಗಳು, ಸಮುದಾಯಗಳು, ಕೈಗಾರಿಕೆಗಳು ಹಾಗೂ ಸರ್ಕಾರಗಳು ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಮತ್ತು ತ್ಯಜಿಸುವ ವಿಧಾನಗಳ ಬಗ್ಗೆ ಪುನರಾಲೋಚನೆ ಮಾಡಲು ಪ್ರೇರೇಪಿಸಬೇಕಿದೆ ಎಂದರು.