ಉದ್ಯಮಿಯಾಗು, ಉದ್ಯೋಗ ನೀಡು ಸಮಾವೇಶ

190422 Harapanahalli Job Fair Leaflet Released
ಹರಪನಹಳ್ಳಿಯಲ್ಲಿ ವೀರಶೈವ ಪಂಚಾಮಸಾಲಿ ಲಿಂಗಾಯತ ಸಮುದಾದಿಂದ ಮಂಗಳವಾರ ಉದ್ಯೋಗ ಮೇಳದ ಕರಪತ್ರ ಬಿಡುಗಡೆ ಮಾಡಲಾಯಿತು.
Published on

ಹರಪನಹಳ್ಳಿ: ‘ಉದ್ಯಮಿಯಾಗು ಉದ್ಯೋಗ ನೀಡು’ ಹಾಗೂ ರಾಷ್ಟ್ರೀಯ ಶಿಕ್ಷಣ ಕೌಶಲ ಕೃಷಿ ಸಮಾವೇಶದಡಿ ಏ.23 ಮತ್ತು 24 ರಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯದ ತಾಲೂಕು ಅಧ್ಯಕ್ಷ ಬೆಟ್ಟನಗೌಡ್ರು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಐಟಿಬಿಟಿ, ಬೃಹತ್ ಕೈಗಾರಿಕೆ ಹಾಗೂ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ನಡೆಯುವ ಮೇಳದಲ್ಲಿ ದೇಶದ ಅನೇಕ ಕಂಪನಿಗಳು ಪಾಲ್ಗೊಳ್ಳಲಿವೆ. ಈ ಮೂಲಕ 5 ಸಾವಿರ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡವ ಗುರಿ ಹೊಂದಲಾಗಿದೆ ಎಂದರು.

ಸಮುದಾಯದ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಪಾಟೀಲ್ ಮಾತನಾಡಿ, 10ನೇ ತರಗತಿ ವಿದ್ಯಾರ್ಹತೆ ಮೇಲ್ಪಟ್ಟ ಯಾವುದೇ ಸಮುದಾಯದ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು. ತಮ್ಮ ಶಿಕ್ಷಣ, ಅರ್ಹತೆಗೆ ತಕ್ಕಂತೆ ಕೆಲಸ ಪಡೆಯಲು ಇದು ಸದಾವಕಾಶವಾಗಿದೆ. ತಾಲೂಕಿನ ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮೇಳದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದಸ್ವಾಮೀಜಿ, ಉಡುಪಿಯ ಮಠದ ಪೇಜಾವರ ವಿಶ್ವ ಪ್ರಸನ್ನ ತೀರ್ಥರು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ವಿರೋಧ ಪಕ್ಷದ ನಾಯಕರು, ಸಮಾಜದ ಹಿರಿಯ ಮಾರ್ಗದರ್ಶಿಗಳು ಆಗಮಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net