ವಿದ್ಯುತ್ ತಂತಿ ತಗುಲಿ ರೈತ ಸಾವು

Yaddihalli Farmer H Jambappa
ಎಚ್.ಜಂಬಪ್ಪ.
Published on

ಹರಪನಹಳ್ಳಿ: ಜಮೀನಿಗೆ ನೀರು ಹಾಯಿಸಲು ಹೋಗಿದ್ದ ವೇಳೆ ವಿದ್ಯುತ್ ತಂತಿ ತಗುಲಿದ್ದರಿಂದ ರೈತರೊಬ್ಬರು ಗುರುವಾರ ಮಧ್ಯಾಹ್ನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲೂಕಿನ ಯಡ್ಡಿಹಳ್ಳಿ ಗ್ರಾಮದ ಹೊಳಲು ಜಂಬಪ್ಪ(48) ಮೃತ. ಹೊಲದಲ್ಲಿನ ಬೆಳೆಯುತ್ತಿದ್ದ ಈರುಳ್ಳಿ ಬೆಳೆಗೆ ಎಂದಿನಂತೆ ನೀರು ಹಾಯಿಸಲು ಹೋದಾಗ ಮೋಟಾರ್ ಆನ್ ಮಾಡುವ ವೇಳೆ ಮೋಟಾರ್‌ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ತಂತಿ ತಗುಲಿದ್ದೇ ಅವಘಡಕ್ಕೆ ಕಾರಣ. ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶುಕ್ರವಾರ ಬೆಳಗ್ಗೆ ಯಡ್ಡಿಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net