ಹರಪನಹಳ್ಳಿ ಅಭಿವೃದ್ಧಿಗೆ ಸಹಕರಿಸಿ

16 HRP 04
ಹರಪನಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಭೂಮಿ ಪೂಜೆ ನೆರವೇರಿಸಿದರು. ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಅಧ್ಯಕ್ಷೆ ಎಂ.ಪಾತೀಮಾಬಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಸದಸ್ಯರಾದ ಅಬ್ದುಲ್ ರಹಿಮಾನ್, ಜಾಕೀರ ಹುಸೇನ್, ಮಂಜುನಾಥ ಇಜಂತಕರ್, ಕೂಲ್ ಇರ್ಪಾನ್, ವಾಗೀಶ, ಎಲ್.ಮಂಜನಾಯ್ಕ, ಎನ್.ಶಂಕರ, ಹೇಮಣ್ಣ , ಅಲೀಂ,ಗುಡಿ ನಾಗರಾಜ, ಎಇಇ ರಾಘವೇಂದ್ರ ಇತರರಿದ್ದರು.
Published on

ಹರಪನಹಳ್ಳಿ: ಪಟ್ಟಣದ ಸಂತೆ ಮಾರುಕಟ್ಟೆ ಹಾಗೂ ಕೊಟ್ಟೂರು ರಸ್ತೆಯಲ್ಲಿನ ವೃತ್ತ ಅಭಿವೃದ್ಧಿಗೆ ಕಕ ಅಭಿವೃದ್ದಿ ಮಂಡಳಿಯಿಂದ 1.70ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕೊಟ್ಟೂರು ವೃತ್ತದಲ್ಲಿ ಎರಡೂ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಶನಿವಾರ ಮಾತನಾಡಿದರು. ವೃತ್ತದ ಎರಡು ಬದಿಯಲ್ಲಿ ಒಟ್ಟು 165 ಮೀಟರ್ ಉದ್ದದ ಚರಂಡಿ ನಿರ್ಮಾಣ, ಪೈಪಲೈನ್‌ಗಳ ದುರಸ್ತಿ, ವಿದ್ಯುತ್ ಕಂಬಗಳ ಸ್ಥಳಾಂತರ, ರಸ್ತೆ ಸುರಕ್ಷಾ ಅಂಶಗಳು ಸೇರಿ ಕೊಟ್ಟೂರು ವೃತ್ತ ಅಭಿವೃದ್ಧಿಗೊಳಿಸಲಾಗುವುದು. ಈ ವೇಳೆ ಸಾರ್ವಜನಿಕರು ಕೆಲಸಕ್ಕೆ ಅಡ್ಡಿಪಡಿಸದೆ ನಗರದ ಅಭಿವೃದ್ಧಿಗೆ ಸಹಕರಿಸಬೇಕು.

ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ 1,743 ಚ.ಮೀ ಪೇವರ್ ಬ್ಲಾಕ್ ರಸ್ತೆ ಮತ್ತು 285 ಮೀಟರ್ ಉದ್ದದ ಸಿಸಿ ಚರಂಡಿ ನಿರ್ಮಾಣ, 3 ಗೇಟ್‌ಗಳು, ಆರ್ಚ್ ನಿರ್ಮಾಣ, ತರಕಾರಿ ತೊಳೆಯಲು ಪ್ಲಾಟ್ ಪಾರ್ಮ್, ವಿದ್ಯುತ್ ಕಾಮಗಾರಿ ಹೀಗೆ ನಾನಾ ಕೆಲಸಗಳ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜನಪ್ಪ ಮಾತನಾಡಿ, ಹರಪನಹಳ್ಳಿ ಅಭಿವೃದ್ಧಿಗೆ ಡಿಎಂಎಫ್ ಅನುದಾನದಲ್ಲಿ 8-10 ಕೋಟಿ ರೂ. ಬಂದಿದೆ. ಐ.ಬಿ.ವೃತ್ತದ ಅಭಿವೃದ್ಧಿಗೆ 3.50 ಕೋಟಿ ರೂ. ನಿಗದಿಯಾಗಿದೆ. ತಾಲೂಕಿನ ಪ್ರತಿ ಗ್ರಾಪಂಗೂ 15-20 ಕೋಟಿ ರೂ. ಅನುದಾನ ಶಾಸಕರು ನೀಡಿದ್ದಾರೆ.

ನಂಜುಂಡಪ್ಪ ವರದಿ ಅನ್ವಯ ಅತೀ ಹಿಂದುಳಿದ ತಾಲೂಕುಗಳಲ್ಲಿ ಹರಪನಹಳ್ಳಿ ಒಂದಾಗಿತ್ತು. ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿಯನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸಿದ ಕೀರ್ತಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರಿಗೆ ಸಲ್ಲುತ್ತದೆ. ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹಾಗೂ ಸರ್ಕಾರಿ ಹುದ್ದೆ ಪಡೆಯಲು ಅನುಕೂಲವಾಯಿತು ಎಂದು ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net