ಮೊದಲ ಹಂತದಲ್ಲಿ ಉಚ್ಚೆಂಗೆಮ್ಮ ದೇಗುಲ ಅಭಿವೃದ್ಧಿ

110322 Harapanahalli Uchangidurga Rasammanjari Program
ಹರಪನಹಳ್ಳಿ ತಾಲೂಕಿನ ಉಚ್ಛಂಗಿದುರ್ಗದಲ್ಲಿ ಬೆಂಗಳೂರಿನ ಗಂಧರ್ವ ಈವೆಂಟ್ಸ್‌ರಿಂದ ರಸಮಂಜರಿ ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು.
Published on

ಹರಪನಹಳ್ಳಿ: ರಾಜ್ಯದ ಮುಜರಾಯಿ ಇಲಾಖೆಯಡಿ ‘ಎ’ ಗ್ರೇಡ್ ನಲ್ಲಿರುವ 205 ದೇವಸ್ಥಾನಗಳ ಪೈಕಿ ಪ್ರಧಾನಿ ಮೋದಿ ಅವರ ಕನಸಿನಂತೆ ಮೊದಲ ಹಂತದಲ್ಲಿ ಉಚ್ಚೆಂಗೆಮ್ಮ ದೇವಸ್ಥಾನವನ್ನೊಳಗೊಂಡು 25 ದೇವಸ್ಥಾನಗಳನ್ನು 1140 ರೂ. ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವೆ ಎಂದು ಮುಜರಾಯಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಉತ್ಸವಾಂಬ ದೇವಿಯ ಹಿರೇಹಬ್ಬದ ಜಾತ್ರಾಮಹೋತ್ಸವದ ಪ್ರಯುಕ್ತ ಗಂಧರ್ವ ಈವೆಂಟ್ಸ್‌ರವರಿಂದ ಸಾಂಸ್ಕೃತಿಕ, ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಉಚ್ಚಂಗಿದುರ್ಗ ದೇವಸ್ಥಾನವನ್ನು ಭಕ್ತರ ಅನುಕೂಲಕ್ಕೆ ತಕ್ಕಂತೆ ಅಗತ್ಯ ಮೂಲಸೌಕರ್ಯ, ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆ ಪೈಪ್‌ಲೈನ್ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಉದ್ಘಾಟನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಜಲನಿಗಮದ ಅನುಮೋದನೆ ಪಡೆದಿದ್ದು. ಏಪ್ರಿಲ್‌ನಲ್ಲಿ ಜಗಳೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಶಾಸಕ ಎಸ್.ವಿ.ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದಲ್ಲಿ ಮುಂದಿನ ಮಳೆಗಾಲದ ವೇಳೆಗೆ ಕೆರೆಗಳಿಗೆ ನೀರು ಭರ್ತಿಯಾಗಲಿವೆ ಎಂದರು. ಬೆಂಗಳೂರಿನ ಗಂಧರ್ವ ಈವೆಂಟ್ಸ್ ವತಿಯಿಂದ ಅರ್ಜುನ್ ಜನ್ಯ ಹಾಗೂ ಚಂದನಶೆಟ್ಟಿ ತಂಡದಿಂದ ಸಾಂಸ್ಕೃತಿಕ, ರಸಮಂಜರಿ ಕಾರ್ಯಕ್ರಮ ಜನಸೂರೆಗೊಂಡಿತು.

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ, ಉಪವಿಭಾಗಾಧಿಕಾರಿ ಎಚ್.ಜಿ.ಚಂದ್ರಶೇಖರಯ್ಯ, ಡಿವೈಎಸ್‌ಪಿ ಹಾಲಮೂರ್ತಿರಾವ್, ಗಾಯಿತ್ರಿ ಸಿದ್ದೇಶ್ವರ್, ಇಂದಿರಾ ರಾಮಚಂದ್ರ, ಗ್ರಾಪಂ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷೆ ಕಾಳಮ್ಮ, ಮುಖಂಡರಾದ ಸೊಕ್ಕೆನಾಗರಾಜ್, ವೈ.ಡಿ.ಅಣ್ಣಪ್ಪ, ಬಿಜೆಪಿ ಮುಖಂಡ ಯಶವಂತರಾವ್ ಜಾಧವ್, ಜೆ.ಎಂ. ಗೋಪಿನಾಯ್ಕ, ಹನುಮಂತಪ್ಪ, ಕೆಂಚಪ್ಪ, ಸಿದ್ದಪ್ಪ, ಬಾಲೇನಹಳ್ಳಿ ಕೆಂಚನಗೌಡ, ವಿಜೇಂದ್ರ ಸಿಂಹ, ಫಣಿಯಾಪುರಲಿಂಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net