ಮತಾಂತರ ಕಾಯ್ದೆ ಹಿಂಪಡೆಗೆ ಸಿಪಿಐ(ಎಂ) ಆಗ್ರಹ

17012022 Harapanahalli cpim protest
??????????
Published on


ಹರಪನಹಳ್ಳಿ: ಮತಾಂತರ ಕಾಯ್ದೆ ಹಿಂಪಡೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ತಾಲೂಕು ಸಮಿತಿ ಮುಖಂಡರು ಸೋಮವಾರ ಪಟ್ಟಣದ ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಎಲ್. ನಂದೀಶ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಮಂಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ವಿಧೇಯಕವು ಧಾರ್ಮಿಕ ಸ್ವಾತಂತ್ರೃಕ್ಕೆ ಧಕ್ಕೆ ತಂದಿದೆ. ಈ ಸಂವಿಧಾನ ವಿರೋಧಿ ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸಮಿತಿಯ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಟಿ.ವಿ. ರೇಣುಕಮ್ಮ, ಕೆ.ರಾಜಪ್ಪ ಹುಲಿಕಟ್ಟಿ, ಎಂ.ರಹಮತ್, ಎಂ. ಶಬ್ಬೀರ್, ಸಿ. ಮಂಜಪ್ಪ, ಬಸವರಾಜ, ಶಿಖಂದರ್, ಬಾಷಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net