ಕ್ಷೇತ್ರ ಮುಂದುವರಿಸದಿದ್ದರೆ ಚುನಾವಣೆ ಬಹಿಷ್ಕಾರ

060622 Traffic barriers demanding the continuation of the Kanjikere GPU constituency
ಕಂಚಿಕೆರೆ ಜಿಪಂ ಕ್ಷೇತ್ರವನ್ನು ಮುಂದುವರಿಸಲು ಆಗ್ರಹಿಸಿ ಹರಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮಸ್ಥರು ಸೋಮವಾರ ಸಂಚಾರ ತಡೆ ನಡೆಸಿ, ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರಗೆ ಮನವಿ ಸಲ್ಲಿಸಿದರು.
Published on

ಹರಪನಹಳ್ಳಿ: ತಾಲೂಕಿನ ಕಂಚಿಕೆರೆ ಜಿಪಂ ಕ್ಷೇತ್ರ ಯಥಾವತ್ತು ಕ್ಷೇತ್ರವನ್ನು ಮುಂದುವರಿಸಲು ಒತ್ತಾಯಿಸಿದ ಕಂಚಿಕೆರೆ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರು ಹಾಗೂ ಸಂಘಟನೆಗಳು ಕಂಚಿಕೆರೆಯಲ್ಲಿ ಸೋಮವಾರ 3 ಗಂಟೆಗೂ ಹೆಚ್ಚು ರಸ್ತೆ ಸಂಚಾರ ತಡೆ ನಡೆಸಿ ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರಗೆೆ ಮನವಿ ಸಲ್ಲಿಸಿದರು.

ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ರೆಡ್ಡಿ ಶಾಂತಕುಮಾರ್ ಮಾತನಾಡಿ 15 ವರ್ಷ ಕಂಚಿಕೆರೆ ಜಿಪಂ ಕ್ಷೇತ್ರವಾಗಿತ್ತು. ಇದೀಗ ಬದಲಾಯಿಸಿದ್ದು, ಇದರಿಂದ ತುಂಬಾ ನೋವಾಗಿದೆ. ಕಂಚಿಕೆರೆ ಜಿಪಂ ಕ್ಷೇತ್ರವಾಗುವವರೆಗೂ ಹೋರಾಟ ನಿಲ್ಲುಸುವುದಿಲ್ಲ. ಮುಂದಿನ ದಿನಗಳಲ್ಲಿ ಮತದಾನ ಬಹಿಷ್ಕರಿಸಲಾಗುವುದು. ಕಂಚಿಕೆರೆಯಿಂದ ಹರಪನಹಳ್ಳಿಯವರೆಗೆ ಪಾದಯಾತ್ರೆ ಕೂಡ ಹಮ್ಮಿಕೊಳ್ಳಲಾಗುವುದೆಂದು ಎಂದರು.

ಭೋವಿ ಸಮುದಾದಯ ತಾಲೂಕು ಅಧ್ಯಕ್ಷ ಎಂ.ಬಿ.ಅಂಜಿನಪ್ಪ ಮಾತನಾಡಿ, ಕಂಚಿಕೆರೆ ಗ್ರಾಮಕ್ಕೆ ಯಾವುದೇ ಅಡಚಣೆಯಿಲ್ಲ. ಕ್ಷೇತ್ರವು ಎಲ್ಲಾ ವಿಭಾಗದಲ್ಲಿ ಉತ್ತಮವಾಗಿದ್ದು ಯಥಾರೀತಿ ಮುಂದುವರಿಸಬೇಕು ಎಂದರು.

ಡಾ. ಕೆ.ಬಿ.ಕೊಟ್ರೇಶ್, ಸದ್ಯೋಜಾತಪ್ಪ, ಭೋವಿ ಅಂಜಿನಪ್ಪ, ವಕೀಲರಾದ ಹಲಗೇರಿ ಮಂಜಪ್ಪ, ನಾಗರಾಜ್, ಕೆಂಚನಗೌಡ, ಕೆ.ಬಿ.ಬಸವರಾಜಪ್ಪ, ಸುನೀಲ್ ಕುಮಾರ್, ಶಿವಕುಮಾರ್, ಹನುಮಂತಪ್ಪ, ಪಂಚಪ್ಪ, ಬಸಣ್ಣ, ರಾಜಪ್ಪ, ವಿಜಯಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net