ಸಿಸಿ ರಸ್ತೆ ಜತೆಗೆ ಎಡ - ಬಲ ಬದಿಗೆ ಚರಂಡಿ ನಿರ್ಮಿಸಿದಾಗಿ ಹೇಳಿದ ಶಾಸಕ ಜಿ.ಕರುಣಾಕರರೆಡ್ಡಿ

100822 Bhumi Pooja for Hiremegalageri CC road work
ಹರಪನಹಳ್ಳಿ ತಾಲೂಕಿನ ಹಿರೇಮೆಗಳಗೇರಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಜಿ.ಕರುಣಾಕರರೆಡ್ಡಿ ಭೂಮಿ ಪೂಜೆ ನೇರವೇರಿಸಿದರು.
Published on

ಹರಪನಹಳ್ಳಿ: ತಾಲೂಕಿನ ಹಿರೇಮೆಗಳಗೇರಿಯಲ್ಲಿ 4ಕೋಟಿ ರೂ.ವೆಚ್ಚದಲ್ಲಿ ಹಿರೇಮೆಗಳಗೇರಿಯಿಂದ ಜಗಳೂರು ಗಡಿ ಸೇರುವ ಗ್ರಾಮದವರೆಗೆ ಸಿಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಕರುಣಾಕರರೆಡ್ಡಿ ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ತಾಲೂಕಿನ ಹಿರೇಮೆಗಳಗೇರಿ, ಚಿಕ್ಕಮೇಗಳಗೇರಿ, ಪೋತಲಕಟ್ಟಿ, ವಡ್ಡಿನಹಳ್ಳಿ, ಅರೆ ಬಸಾಪುರ ನೀರಾವರಿ ಪ್ರದೇಶಗಳಾಗಿದ್ದು, ರಸ್ತೆಗಳ ಡಾಂಬರೀಕರಣ ಹಾಳಾಗಿತ್ತು. ಪ್ರಸ್ತುತ ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾ ಮುಖ್ಯರಸ್ತೆ ಮತ್ತು ಇತರೆ ರಸ್ತೆಗಳ ಸುಧಾರಣೆಯ ಯೋಜನೆಯಡಿ ಸಿಸಿ ರಸ್ತೆಯನ್ನು ಹಾಗೂ ಎಡ ಮತ್ತು ಬಲಕ್ಕೆ ಚರಂಡಿ ನಿರ್ಮಾಣ ಮಾಡುವ ಮೂಲಕ ಗಡಿ ಭಾಗದ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಲು ಪ್ರಯತ್ನಿಸುವೆ ಎಂದರು.

ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಆರ್.ಲೋಕೇಶ್, ಚೌಡಾಪುರ ಷಣ್ಮುಖಪ್ಪ, ಅಂಗಡಿ ಚಂದ್ರಪ್ಪ, ನಾಟಿ ವೈದ್ಯ ದೇವೆಂದ್ರಪ್ಪ, ಇಂಜಿನಿಯರ್ ಕುಬೇಂದ್ರನಾಯ್ಕ, ಅಶೋಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net