ಹರಪನಹಳ್ಳಿಯಲ್ಲಿ ಎಮ್ಮೆ ಬೆದರಿಸುವ ಸ್ಪರ್ಧೆ

Untitled design-4
ಹರಪನಹಳ್ಳಿಯಲ್ಲಿ ಗೌಳಿಗರು ಎಮ್ಮೆ ಬೆದರಿಸುವ ಸ್ಪರ್ಧೆ ಆಚರಿಸುವ ಮೂಲಕ ಗುರುವಾರ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದರು.
Published on

ಹರಪನಹಳ್ಳಿ: ನಗರದ ಗೌಳೇರ ಓಣಿ, ಗೋವೆರಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಗೌಳಿಗರು ಎಮ್ಮೆ ಬೆದರಿಸುವ ಸ್ಪರ್ಧೆ ಮೂಲಕ ಗುರುವಾರ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದರು.

ಗೌಳಿಗರ ಮನೆಗಳಲ್ಲಿ ಹಬ್ಬದ ದಿನ ಅರಿಶಿಣದ ಘಟ ಸ್ಥಾಪಿಸುವ ಮೂಲಕ ಪಾಂಡವರ ಹಬ್ಬಕ್ಕೆ ಚಾಲನೆ ನೀಡಿದ್ದರು. ಅಮಾವಾಸ್ಯೆ ದಿನ ಎಮ್ಮೆಗಳಿಗೆ ಮಜ್ಜನ ಮಾಡಿಸಿ, ಮರುದಿನ ಎಮ್ಮೆಗಳಿಗೆ ಅರಿಸಿಣ, ನವಿಲುಗರಿ, ಕೊರಳಗೆಜ್ಜೆ, ಮುತ್ತಿನಹಾರ, ಕುಂಕುಮ ಲೇಪಿಸಿದರು.

ಹೊಸ ಕಟ್ಟಿಗೆಯ ಎರಡು ತುಂಡುಗಳನ್ನು ತಂದು ಎಮ್ಮೆ ಕಟ್ಟುವ ಕೊಟ್ಟಿಗೆಯಲ್ಲಿ ನೆಟ್ಟು, ಸಗಣಿಯಿಂದ ತಯಾರಿಸಿದ ಪಾಂಡವರ ಘಟ್ಟದ ಎದುರು ಸ್ಥಾಪಿಸಿದ ಒಲೆಯ ಮೇಲೆ ಹೊಸ ಮಡಕೆಯಲ್ಲಿ ಸ್ಯಾವಿಗೆ, ಹಾಲು, ತುಪ್ಪ ಹಾಕಿ ಬೇಯಿಸಲಾಗುತ್ತದೆ. ಒಲೆಯ ಮೇಲೆ ಹಾಲು ಉಕ್ಕುತ್ತಿದ್ದಂತೆಯೇ ಆ ಬೆಂಕಿಯಲ್ಲಿ ಕಾದು ಕೆಂಡವಾಗಿರುವ ಸಲಾಕೆಯಿಂದ ಎಮ್ಮೆಗಳಿಗೆ ಗುಲ್ (ಮುದ್ರೆ) ಹಾಕಲಾಗುತ್ತದೆ. ದನ ಕಾಯುವ ವ್ಯಕ್ತಿ ಪಾಂಡವರ ಎಡೆಗೆ ಆರತಿ ಬೆಳಗಿದ ಬಳಿಕ ಎಮ್ಮೆ ಬೆದರಿಸಲಾಗುವುದು ಎಂದು ಗೌಳಿಗರ ಹಿರಿಯರಾದ ಸಾವಿತ್ರಮ್ಮ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net