ನುಲಿಯ ಚಂದಯ್ಯನವರ ಜಯಂತಿ ಆಚರಣೆ

HRP-CHANDYYA-AUG 03
Published on

ಹರಪನಹಳ್ಳಿ: ಪಟ್ಟಣದ ಭರಮದೇವರ ದೇವಸ್ಥಾನ ಆವರಣದಲ್ಲಿ ಸೋಮವಾರ ತಾಲೂಕು ಕೊರಮ ಸಮಾಜದಿಂದ ಶಿವ ಶರಣ ನುಲಿಯ ಚಂದಯ್ಯ ಅವರ 993ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಸಮಾಜದ ಅಧ್ಯಕ್ಷ ಎಸ್.ದುರುಗಪ್ಪ ಭಜಂತ್ರಿ ಮಾತನಾಡಿ, ಕರೊನಾ ನಿಯಂತ್ರಣ ಕಾರಣ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗಿದೆ ಎಂದು ತಿಳಿಸಿದರು.

ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ತೀರಾ ಹಿಂದುಳಿದಿದೆ. ಸಮುದಾಯ ಎಲ್ಲ ರಂಗದಲ್ಲೂ ಮುಂದುವರಿಯಲು ಶಿಕ್ಷಣ ಅತ್ಯಗತ್ಯ. ಹೀಗಾಗಿ ಎಲ್ಲರೂ ಶಿಕ್ಷಣದ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಅಗ್ನಿಶಾಮಕ ದಳದ ಅಧಿಕಾರಿ ಎಚ್.ಕೆ.ರಾಮಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಖಿಲ ಕರ್ನಾಟಕ ಕೊರಮ ಸಮಾಜದ ಯುವ ಘಟಕದ ಅಧ್ಯಕ್ಷ ಎ.ರಾಜಕುಮಾರ, ರಾಜ್ಯ ಉಪಾಧ್ಯಕ್ಷ ಮುತ್ತಿಗಿ ಹಾಲೇಶ್, ತಾಲೂಕು ಕಾರ್ಯದರ್ಶಿ ಬಸವರಾಜ, ಮುಖಂಡರಾದ ಕೆ.ನಾಗಪ್ಪ, ಕೆ.ಗಂಗಪ್ಪ, ನಾಗರಾಜ, ಕೆ.ಚನ್ನಪ್ಪ, ತುಕಾರಾಮ್ ಭಜಂತ್ರಿ, ಟಿ.ನಾಗರಾಜ, ಕೆಂಚಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net