ಬಾಗಳಿ ಪಂಚಾಯಿತಿಗೆ ಬಿ.ಬಿ. ನಾಗರಾಜ ಅಧ್ಯಕ್ಷ

300522 Bagali GP President BB Nagaraj Selection
ಬಾಗಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿ.ಬಿ. ನಾಗರಾಜ ಅವಿರೋಧ ಆಯ್ಕೆಯಾದರು.
Published on

ಹರಪನಹಳ್ಳಿ: ತಾಲೂಕಿನ ಬಾಗಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಬಿ. ನಾಗರಾಜ ಅವಿರೋಧ ಆಯ್ಕೆಯಾಗಿದ್ದಾರೆ. ಕೋಡಿಹಳ್ಳಿ ಕೊಟ್ರಮ್ಮನವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಿ.ಬಿ. ನಾಗರಾಜ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರೋಧ ಆಯ್ಕೆಯೆಂದು ತಹಸೀಲ್ದಾರ್, ಚುನಾವಣಾಧಿಕಾರಿ ಡಾ.ಶಿವಕುಮಾರ ಬಿರಾದಾರ್ ಘೋಷಿಸಿದರು. 16 ಸದಸ್ಯ ಬಲದ ಪಂಚಾಯಿತಿಯಲ್ಲಿ 15 ಮಂದಿ ಮಾತ್ರ ಚುನಾವಣೆಯಲ್ಲಿ ಭಾಗವಹಿಸಿದ್ದರು.

ನೂತನ ಅಧ್ಯಕ್ಷ ಬಿ.ಬಿ.ನಾಗರಾಜ ಮಾತನಾಡಿ, ನನಗೆ ದೊರೆತ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು. ಗ್ರಾಮದ ಯುವಕರು ಕೇಕ್ ಕತ್ತರಿಸಿ ಅಧ್ಯಕ್ಷರಿಗೆ ಶುಭಕೋರಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಮುಖಂಡರಾದ ಕೆ. ಭರಮನಗೌಡ, ಗುರುಬಸವರಾಜ, ವಿ.ಬಿ. ವೀರೇಶ್, ಚಿನ್ನಪ್ಪ, ಪಿ.ಕೊಟ್ರಪ್ಪ, ವೆಂಕಟೇಶ್, ಶಶಿ, ಕೆ.ಗಾಂಧಿಯಪ್ಪ, ಅಜ್ಜಪ್ಪ, ಮುನ್ನಾಪ್, ಮಂಜುನಾಥ, ಮುನೀರ್, ಅಜೀಜ್, ಮೂಗನಗೌಡ್ರ ಮಂಜಪ್ಪ, ಉತ್ತಂಗಿ ಅಂಜಿನಪ್ಪ, ಉಮೇಶ, ಸಿ.ಪಿ. ಚಿದಾನಂದಪ್ಪ, ಸಿಪಿ ಮಂಜುನಾಥ ಗೌಡ ಮತ್ತಿತರರು ನೂತನ ಅಧ್ಯಕ್ಷರನ್ನು ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net