

ಹರಪನಹಳ್ಳಿ: ತಾಲೂಕಿನ ಅಣಜಿಗೆರೆ ಗ್ರಾಪಂ ಅಧ್ಯಕ್ಷರಾಗಿ ಉಜ್ಜಪ್ಳ ಮಂಜುನಾಥ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷ ಆರ್.ಸಿದ್ದೇಶ್ ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ಉಜ್ಜಪ್ಳ ಮಂಜುನಾಥ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾದ ಗ್ರೇಡ್ 2 ತಹಸೀಲ್ದಾರ್ ಪ್ರಭುಗೌಡ ಘೋಷಿಸಿದರು.
ಪ್ರಮುಖರಾದ ಮತ್ತಿಹಳ್ಳಿ ನಿಂಗಪ್ಪ, ಕೆ.ಚಂದ್ರಪ್ಪ,ಯು ರೇವಣಸಿದ್ದಪ್ಪ, ಕೆ.ಇ.ಬಸವರಾಜ, ಎಚ್.ನಾಗರಾಜ, ಸಿದ್ದೇಶ್, ಮೇಘರಾಜ, ಸೈಯದ್ ಅಹಮ್ಮದ್, ವಕೀಲ ಕೆ.ಡಿ. ಮರಿಯಪ್ಪ, ಟಿ.ಎಂ.ರವೀಂದ್ರ, ಯು.ರೇವಣ್ಣ, ವೈ.ನಾಗರಾಜ, ಪಂಚಣ್ಣ, ಪಿಡಿಒ ಪರಮೇಶ್ಬರಪ್ಪ ಇತರರು ಇದ್ದರು.
ಒಂದೇ ಕುಟುಂಬದ ಇಬ್ಬರು: 2000ನೇ ಇಸ್ವಿಯಲ್ಲಿ ಅಣಜಿಗೆರೆ ಗ್ರಾಪಂ ಅಧ್ಯಕ್ಷೆಯಾಗಿ ಕಾಳಮ್ಮ ಆಯ್ಕೆಯಾಗಿ 3 ವರ್ಷ ಆಡಳಿತ ನಡೆಸಿದ್ದರು. ಈಗ ಅವರ ಪುತ್ರ ಉಜ್ಜಪ್ಳ ಮಂಜುನಾಥ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ಒಂದೇ ಕುಟುಂಬದ ಇಬ್ಬರಿಗೆ ಗ್ರಾಪಂ ಅಧ್ಯಕ್ಷ ಸ್ಥಾನ ಒಲಿದು ಬಂದಂತಾಗಿದೆ.
ಸರ್ವ ಸದಸ್ಯರ ಸಹಕಾರದಿಂದ ಗ್ರಾಪಂ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಗ್ರಾಪಂ ವ್ಯಾಪ್ತಿಯ 7 ಊರುಗಳಲ್ಲಿ ಮೂಲ ಸೌಕರ್ಯ ಹಾಗೂ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸಲು ಯತ್ನಿಸುತ್ತೇನೆ.| ಉಜ್ಜಪ್ಳ ಮಂಜುನಾಥ್, ಅಣಜಿಗೆರೆ ಗ್ರಾಪಂ ಅಧ್ಯಕ್ಷ