ಸರ್ವರೋಗಕ್ಕೂ ಮದ್ದು ಯೋಗ; ವೀರಶೈವ ಲಿಂಗಾಯುತ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿಕೆ

160522 Harapanahalli Yoga Rathayatre
ಹರಪನಹಳ್ಳಿಯಲ್ಲಿ ಯೋಗ ರಥಯಾತ್ರೆ ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮೀಜಿ ಮಾತನಾಡಿದರು. ಸಂಸದ ದೇವೇಂದ್ರಪ್ಪ ಇದ್ದರು.
Published on

ಹರಪನಹಳ್ಳಿ: ಯೋಗವನ್ನು ಇಡೀ ವಿಶ್ವಕ್ಕೆ ಕೊಟ್ಟಿದ್ದು ಭಾರ. 196 ದೇಶಗಳು ಜೂನ್ 21 ರಂದು ಯೋಗ ದಿನಾಚರಣೆ ಮಾಡುತ್ತಿವೆ ಎಂದು ಎಂದು ವೀರಶೈವ ಲಿಂಗಾಯುತ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಭಾನುವಾರ ರಾತ್ರಿ ಯೋಗ ರಥ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸೂರ್ಯನ ಕಿರಣಗಳು ಅತಿ ಹೆಚ್ಚು ಹೊತ್ತು ಭೂಮಿ ಮೇಲೆ ಇರುವುದು ಜೂನ್ 21 ರಂದು. ಆದ್ದರಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ಆಚರಿಸಲಾಗುತ್ತದೆ. ಸಮಾಧಾನ ಇರುವುದೇ ಯೋಗದಲ್ಲಿ. ಯೋಗಕ್ಕೆ ಯಾವುದೇ ಜಾತಿ ಮತ ಪಂಥವಿಲ್ಲ ಎಂದರು.

ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಯೋಗದಿಂದ ಹಲವಾರು ರೋಗಗಳನ್ನು ಹಿಮ್ಮೆಟ್ಟಿಸಬಹುದು ಹಾಗೂ ರೋಗ ಬಾರದಂತೆ ತಡೆಗಟ್ಟಬಹುದು. ಆದ್ದರಿಂದ ಎಲ್ಲರೂ ಯೋಗ ಅಭ್ಯಾಸ ರೂಡಿ ಮಾಡಿಕೊಳ್ಳಿ ಎಂದರು. ವಕೀಲ ಪ್ರಕಾಶ ಪಾಟೀಲ್, ಮುಖಂಡರಾದ ಪಟೇಲ್ ಬೆಟ್ಟನಗೌಡ, ಜಿ.ನಂಜನಗೌಡ, ಯಶವಂತಗೌಡ, ಎಚ್.ಕೆ.ಹಾಲೇಶ, ಬೇಲೂರು ಅಂಜಪ್ಪ, ಶಶಿಧರ ಪೂಜಾರ, ಎಚ್.ಮಲ್ಲಿಕಾರ್ಜುನ, ಎಚ್.ಬಿ.ಪರಶುರಾಮಪ್ಪ, ಸುವರ್ಣ ಅರುಂಡಿ ನಾಗರಾಜ, ಚಂದ್ರಶೇಖರ ಪೂಜಾರ, ಬಾವಿಹಳ್ಳಿ ಬಸವರಾಜ, ಕೆ.ಉಚ್ಚೆಂಗೆಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net