

ಹರಪನಹಳ್ಳಿ: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆದರೆ ಭಾರತೀಯ ಸೇನಾ ಮಾರ್ಗಸೂಚಿ ಪ್ರಕಾರ ಸ್ವಯಂಸೇವಕರಾಗಿ ತೆರಳಲು ಸಿದ್ಧವಾಗಿರಿ ಎಂದು ಎನ್‌ಸಿಸಿ ಅಧಿಕಾರಿ ಡಾ.ಬಸವಲಿಂಗಪ್ಪ ಕಲ್ಮನಿ ಕರೆ ನೀಡಿದರು.
ಪಟ್ಟಣದ ಎಡಿಬಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಆಪರೇಷನ್ ಸಿಂಧೂರ ಸೇವೆ ಜಾಗೃತಿ ಅಭಿಯಾನ ಶಿಬಿರದಲ್ಲಿ ಶನಿವಾರ ಮಾತನಾಡಿದರು. ಉಪನ್ಯಾಸಕ ಬಾಗಳಿ ಶಿವಕುಮಾರ ಮಾತನಾಡಿ, ಪೆಹಲ್ಗಾಮ್‌ದಲ್ಲಿ ಅಮಾಯಕ ಮಹಿಳೆಯರ ಸಿಂಧೂರ ಅಳಸಿ ಹಾಕಿದ ಪಾಕ್ ಉಗ್ರರನ್ನು ಸೈನ್ಯ ಹೊಡೆದು ಹಾಕಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಯುದ್ಧ ಸಂಭವಿಸಿದರೆ ಅಗತ್ಯವಾಗಿ ಎಲ್ಲ ಎನ್‌ಸಿಸಿ ವಿದ್ಯಾರ್ಥಿಗಳು ಸೇನೆಯೊಂದಿಗೆ ಸೇವೆ
ಸಲ್ಲಿಸಲು ಸಿದ್ಧರಿರಬೇಕು. ಇದೊಂದು ಸುವರ್ಣ ಅವಕಾಶ ಎಂದು ತಿಳಿಸಿದರು. ಕಾಲೇಜಿನ 50 ಎನ್‌ಸಿಸಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿ ಒಪ್ಪಿಗೆ ಪತ್ರ ನೀಡಿದರು.