

ರಾಣೆಬೆನ್ನೂರ: ಹಾವು ಕಚ್ಚಿ ಕುರಿಗಾಹಿ ಮೃತಪಟ್ಟ ಘಟನೆ ತಾಲೂಕಿನ ಹರನಗಿರಿ ಗ್ರಾಮದ ಬಳಿ ಬುಧವಾರ ನಡೆದಿದೆ.
ಗ್ರಾಮದ ಬಸವರಾಜ ಕರಿಯಪ್ಪ ಗುಡಿಯವರ (20) ಮೃತ ಯುವಕ.
ಈತ ಮಂಗಳವಾರ ರಾತ್ರಿ ಜಮೀನಿನಲ್ಲಿ ಕುರಿ ನಿಲ್ಲಿಸಿಕೊಂಡು ಅಲ್ಲಿಯೆ ಮಲಗಿಕೊಂಡಿದ್ದ. ಈ ಸಮಯದಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.