ಹಾರಂಗಿ ನಾಲೆ ಸ್ವಚ್ಛಗೊಳಿಸಲು ಆಗ್ರಹ

harangi
Published on

ಕುಶಾಲನಗರ:

ಹಾರಂಗಿ ಜಲಾಶಯದ ಎಡದಂಡೆ ಮುಖ್ಯ ನಾಲೆಯ ಮೇಲೆ ಬೆಳೆದು ನಿಂತಿರುವ ಗಿಡ, ಮರ ಸಸ್ಯಗಳನ್ನು ಕಡಿದು ಕಾಲುವೆಯ ಒಳಗೆ ತುಂಬಿರುವ ಹೂಳು ತೆಗೆಯಬೇಕೆಂದು ಹೆಬ್ಬಾಲೆ, ತೊರೆನೂರು, ಶಿರಂಗಾಲ ಭಾಗದ ಕೃಷಿಕರು ಒತ್ತಾಯಿಸಿದ್ದಾರೆ.

ಜಲಾಶಯ ಈಗಾಗಲೇ ಭರ್ತಿಯಾಗಿದೆ. ಮುಂಗಾರು ಬೆಳೆಗಳಿಗೆ ಶೀಘ್ರದಲ್ಲಿಯೇ ಕೃಷಿಗೆ ನೀರು ಹರಿಸಬೇಕಿದೆ. ಆದರೆ ನೀರಾವರಿ ನಿಗಮದ ಅಧಿಕಾರಿಗಳು ಈ ತನಕ ನಾಲೆಗಳ ಸ್ವಚ್ಛತೆಗೆ ಕ್ರಮ ವಹಿಸಿಲ್ಲ. ಇನ್ನಾದರೂ ಕ್ರಮ ತೆಗೆದುಕೊಳ್ಳಬೇಕು. ಕೂಡಲೇ ಮುಖ್ಯ ನಾಲೆಯೂ ಸೇರಿದಂತೆ ಉಪಕಾಲುವೆಗಳ ಮೇಲೆಲ್ಲಾ ಬೆಳೆದಿರುವ ಕಾಡು ಗಿಡಗಳನ್ನು ತೆರವು ಮಾಡಬೇಕು.

ನಾಲೆಯ ಮೇಲೆ ಕಾಡು ಗಿಡಗಳು ಬೆಳೆದು ನಿಂತಿರುವ ಕಾರಣ ಪಾದಚಾರಿಗಳ ಸಂಚಾರಕ್ಕೂ ತೊಡಕು ಉಂಟಾಗಿದೆ. ಅಲ್ಲದೇ ಹೆಬ್ಬಾಲೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವುದರಿಂದ ಇದೇ ನಾಲೆಗಳ ಮೇಲೆ ಕಾಡಾನೆಗಳು ಸಂಚರಿಸಿದರೆ ಕಾಡಾನೆಗಳು ಕಾಣದಷ್ಟು ಭಯಾನಕವಾದ ಗಿಡಗಂಟಿಗಳು ಬೆಳೆದು ನಿಂತಿವೆ ಎಂದು ರೈತರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net