

ಮಡಿಕೇರಿ:
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳ ಪೈಕಿ ಒಂದಾದ ಹಾರಂಗಿ ರ‍್ತಿ ಆಗಲು ಇನ್ನು 9 ಅಡಿಯಷ್ಟೇ ಬಾಕಿ ಇದೆ. ಸಾಮಾನ್ಯವಾಗಿ ಜೂನ್ ಅಂತ್ಯಕ್ಕೆ ಈ ಮಟ್ಟವನ್ನು ತಲುಪುತ್ತಿದ್ದ ನೀರು ಈ ರ‍್ಷ ಜೂನ್ ಮೊದಲ ವಾರದಲ್ಲಿ ಗುರಿ ಮುಟ್ಟಿದೆ. ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಒಂದು ವೇಳೆ ವರುಣ ಅಬ್ಬರಿಸಿದರೆ ಇನ್ನು 2 ದಿನಗಳಲ್ಲಿ ಅಣೆಕಟ್ಟೆ ಗರಿಷ್ಠ ಮಟ್ಟ ತಲುಪಲಿದೆ.
ಜಿಲ್ಲೆಯ ಮಡಿಕೇರಿ, ಕಾಲೂರು, ಹೆಬ್ಬೆಟಗೇರಿ, ಮಕ್ಕಂದೂರು, ಮುಕ್ಕೋಡ್ಲು, ಹಟ್ಟಿಹೊಳೆ, ಹರದೂರು, ಹೇರೂರು ಸೇರಿದಂತೆ ಹಾರಂಗಿಯ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿದೆ. ಹಾಗಾಗಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಏರಿಕೆ ಆಗಿದ್ದು, ನಿಧಾನಕ್ಕೆ ನೀರಿನ ಮಟ್ಟ ಹೆಚ್ಚಳ ಆಗುತ್ತಿದೆ. ಕಳೆದ 3 ದಿನಗಳ ಹಿಂದೆ ಒಳಹರಿವು ಸುಮಾರು 5 ಸಾವಿರ ಕ್ಯೂಸೆಕ್ ದಾಟಿತ್ತು. ಇದು ಹೀಗೆಯೇ ಮುಂದುವರಿದಿದ್ದರೆ ಈಗಾಗಲೇ ಜಲಾಶಯ ರ‍್ತಿ ಆಗಿರುತ್ತಿತ್ತು. ಆದರೆ ಮಳೆ ಇಳಿಮುಖ ಆಗಿರುವುದರಿಂದ ಒಳಹರಿವಿನ ಪ್ರಮಾಣದಲ್ಲೂ ಇಳಿಕೆ ಆಗಿದ್ದು, ಜಲಾಶಯದ ನೀರಿನ ಮಟ್ಟ ನಿಧಾನಕ್ಕೆ ಏರುತ್ತಿದೆ.
2,859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಸೋಮವಾರದ ಮಾಹಿತಿ ಪ್ರಕಾರ 2,851.13 ಅಡಿಗಳಷ್ಟು ನೀರಿದೆ. ಕಳೆದ ರ‍್ಷ ಇದೇ ದಿನ 2,824.10 ಅಡಿಗಳಷ್ಟು ನೀರಿತ್ತು. ಪ್ರಸ್ತುತ ಜಲಾಶಯಕ್ಕೆ 1,541 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 100 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಾಲುವೆಗೆ ಯಾವುದೇ ನೀರು ಬಿಡುತ್ತಿಲ್ಲ. ಕಳೆದ ರ‍್ಷ ಇದೇ ದಿನ 224 ಕ್ಯೂಸೆಕ್‌ನಷ್ಟು ನೀರಿನ ಒಳಹರಿವು ಇತ್ತು. ನದಿಗೆ 200 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. 8.5 ಟಿಎಂಸಿ ನೀರಿನ ಸಂಗ್ರಹ ಸಾರ‍್ಥ್ಯದ ಜಲಾಶಯದಲ್ಲಿ ಪ್ರಸ್ತುತ 5.418 ಟಿಎಂಸಿ ನೀರಿದೆ. ಕಳೆದ ರ‍್ಷ ಈ ಅವಧಿಯಲ್ಲಿ 2.286 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯ ನೀರಿತ್ತು.
ಕೊಡಗಿನ ಏಕೈಕ ದೊಡ್ಡ ಅಣೆಕಟ್ಟೆ ಹೆಗ್ಗಳಿಕೆಯ ಹಾರಂಗಿಯಲ್ಲಿ 2024ಕ್ಕಿಂತಲೂ ಅಧಿಕ ನೀರಿನ್ನು ಈ ಬಾರಿ ಸಂಗ್ರಹಿಸಿ ಇಟ್ಟುಕೊಳ್ಳಲಾಗಿತ್ತು. ಜೀವನದಿ ಕಾವೇರಿ ವಾಲ್ನೂರು ಬಳಿಯಿಂದ ತನ್ನ ಹರಿವು ಕ್ಷೀಣಿಸಿದ್ದರೂ ಕಾವೇರಿಯ ಉಪನದಿ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟ ಉತ್ತಮವಾಗಿಯೇ ಇತ್ತು. ಮೇ ತಿಂಗಳಿನಲ್ಲೂ ಉತ್ತಮ ಮಳೆ ಆಗಿತ್ತು. ಹಾಗಾಗಿ ಈ ಮಳೆಗಾಲದಲ್ಲಿ ಬೇಗನೇ ಹಾರಂಗಿ ರ‍್ತಿ ಆಗುವ ಹಂತ ತಲುಪಿದೆ.
ಒಂದು ವೇಳೆ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ಅಣೆಕಟ್ಟೆಯ ಕೆಳಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಲಾಶಯದಲ್ಲಿ ನೀರಿನ ಮಟ್ಟವನ್ನು 2,854 ಅಡಿಗೆ ಸೀಮಿತಗೊಳಿಸಲು ಅಧಿಕಾರಿಗಳು ನರ‍್ಧರಿಸಿದ್ದಾರೆ ಎನ್ನಲಾಗಿದೆ. ಜಲಾಶಯದಲ್ಲಿ ನೀರಿನ ಮಟ್ಟ 2,850 ಅಡಿ ತಲುಪುವ ತನಕ ಅಣೆಕಟ್ಟೆಯಲ್ಲಿ ನೀರಿನ ಏರಿಕೆ ಪ್ರಮಾಣ ನಿಧಾನಗತಿಯಲ್ಲಿ ಇರುತ್ತದೆ. ನಂತರ ಇದು ವೇಗ ಪಡೆಯುತ್ತದೆ ಎನ್ನುತ್ತಾರೆ ಅಣೆಕಟ್ಟೆಯ ಅನುಭವಿ ಸಿಬ್ಬಂದಿ ರ‍್ಗ. ಹಾಗಾಗಿ ನೀರಿನ ಮಟ್ಟ 2,850 ಅಡಿ ತಲುಪುತ್ತಿದ್ದಂತೆಯೇ ನದಿಗೆ ಹರಿಸುವುದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ ಈ ರ‍್ಷ ಒಳಹರಿವು ಕಡಿಮೆ ಇರುವುದರಿಂದ ಸ್ವಲ್ಪ ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ
2018ರಲ್ಲಿ ಕುಶಾಲನಗರ ಮತ್ತು ಸುತ್ತಲಿನ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರವಾಹಕ್ಕೆ ಹಾರಂಗಿ ಅಣೆಕಟ್ಟೆಯಲ್ಲಿನ ಅವೈಜ್ಞಾನಿಕ ನೀರಿನ ನರ‍್ವಹಣೆಯೇ ಕಾರಣ ಎನ್ನುವ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲಿ ಅಣೆಕಟ್ಟೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ನೀರಿನ ನರ‍್ವಹಣೆಗೆ ಆದ್ಯತೆ ಕೊಡುತ್ತಿದ್ದಾರೆ.
ಇದರಿಂದಾಗಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗದ ಅಧಿಕಾರಿಗಳು ಮಳೆಗಾಲದ ಅವಧಿಯಲ್ಲಿ ಅಣೆಕಟ್ಟೆ ರ‍್ತಿ ಆಗಲು ಇನ್ನು 10 ಅಡಿಗಳಷ್ಟು ಬಾಕಿ ಇರುವಂತೆಯೇ ನದಿಗೆ ನೀರು ಹರಿಸುವುದು ರೂಢಿಸಿಕೊಂಡಿದ್ದರು. ಆದರೆ ಈಗ ಮಳೆ ಸ್ವಲ್ಪ ಕಡಿಮೆ ಆಗಿರುವುದರಿಂದ ಜಲಾಶಯ ನಿಧಾನಗತಿಯಲ್ಲಿ ತುಂಬುತ್ತಿದೆ.
ಜಲಾಶಯ ರ‍್ತಿ ಆಗುತ್ತಿರುವುದರಿಂದ ಆದಷ್ಟು ಶೀಘ್ರ ಕಾಲುವೆಗಳಿಗೆ ಕೂಡ ನೀರು ಹರಿಸಲಾಗುತ್ತಿದೆ. ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು 1,34,895 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು ಹಾರಂಗಿ ಅಣೆಕಟ್ಟೆಯ ನೀರಿನ ಪ್ರಯೋಜನ ಪಡೆದುಕೊಳ್ಳುತ್ತಾರೆ. ಇಷ್ಟು ಜಾಗದಲ್ಲಿ ಸಮದ್ಧವಾಗಿ ಬೆಳೆ ತೆಗೆಯಬೇಕು ಅಂದರೆ 15 ಟಿಎಂಸಿ ನೀರಿನ ಅಗತ್ಯ ಇದೆ. 8.5 ಟಿಎಂಸಿ ನೀರಿನ ಸಮಗ್ರಹ ಸಾರ‍್ಥ್ಯದ ಹಾರಂಗಿ ಜಲಾಶಯ 2 ಬಾರಿ ಗರಿಷ್ಠ ಪ್ರಮಾಣದಲ್ಲಿ ತುಂಬಿದರೆ ಮಾತ್ರ ಇದು ಸಾಧ್ಯವಾಗುತ್ತದೆ.