ಕ್ರೈಸ್ತ ನಿಗಮಕ್ಕೆ ಮೂಲ ನಿವಾಸಿಗಳೇ ಆಯ್ಕೆಯಾಗಲಿ: ಸಾಡೆ ದೇವಾಲಯದ ಸಭಾಪಾಲಕ ರೆ.ಆಂಡ್ರೂಜಾನ್ ಒತ್ತಾಯ

1 (4)
Published on

ಮಂಡ್ಯ: ರಾಜ್ಯಸರ್ಕಾರ ಕ್ರೈಸ್ತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಮೂಲನಿವಾಸಿ ಕನ್ನಡಿಗ ಕ್ರೈಸ್ತರನ್ನೇ ಆಯ್ಕೆ ಮಾಡಬೇಕೆಂದು ಸಾಡೆ ದೇವಾಲಯದ ಸಭಾಪಾಲಕ ರೆ.ಆಂಡ್ರೂಜಾನ್ ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ನಿಗಮ ಸ್ಥಾಪನೆಯ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಅದರಂತೆ ಸಮುದಾಯದ ಅಭಿವೃದ್ಧಿಗಾಗಿ 100 ಕೋಟಿ ರೂ ಅನುದಾನ ಕಾದಿರಿಸುವ ಮೂಲಕ ಬಹುದಿನದ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಮುಖವಾಗಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸುವಾಗ ಮೂಲ ಕನ್ನಡಿಗರಿಗೆ ಆದ್ಯತೆ ಕೊಡಬೇಕು. ಅದರಲ್ಲಿಯೂ ಅವಕಾಶ ವಂಚಿತ ಕನ್ನಡ ಕ್ರೈಸ್ತರಿಗೆ ಮನ್ನಣೆ ನೀಡಬೇಕು. ಇದರೊಂದಿಗೆ ಸಮುದಾಯದ ಅಭಿವೃದ್ಧಿಗೆ ಪೂರಕ ಸ್ಪಂದನೆಯನ್ನು ಸರ್ಕಾರ ನೀಡಬೇಕೆಂದು ಮನವಿ ಮಾಡಿದರು.

ನಿವೃತ್ತ ತಹಸೀಲ್ದಾರ್ ಸನ್ನುತ, ಜಿಲ್ಲಾ ಕ್ರೈಸ್ತ ಪ್ರಗತಿಪರ ಸಂಸ್ಥೆ ಅಧ್ಯಕ್ಷ ರಾಮಣ್ಣ ಜೋಸ್ೆ, ಕದಂಬ ಸೈನ್ಯದ ಅಧ್ಯಕ್ಷ ಬೇಕ್ರಿ ರಮೇಶ್, ಎಸ್.ಸಂತೋಷ್, ಪುಟ್ಟರಾಜು, ವೈ.ಥಾಮಸ್ ಬೆಂಜಮಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net