ಸಂಭ್ರಮದ ಶ್ರಾವಣ ಸೋಮವಾರ

Happy Shravan Monday
ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು.
Published on

ಕೂಡಲಸಂಗಮ: ಶ್ರಾವಣದ ಎರಡನೇ ಸೋಮವಾರ ಕೂಡಲಸಂಗಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಭಕ್ತರು ಆಗಮಿಸಿ ಕೃಷ್ಣಾ, ಮಲಪ್ರಭಾ ನದಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನವರ ಐಕ್ಯ ಮಂಟಪ ದರ್ಶನ ಪಡೆದರು.

ಕೆಲವು ಭಕ್ತರು ಭಾನುವಾರ ರಾತ್ರಿಯೇ ಸುಕ್ಷೇತ್ರಕ್ಕೆ ಆಗಮಿಸಿದ್ದರೆ, ಇನ್ನೂ ಕೆಲವು ಭಕ್ತರು ಸೋಮವಾರ ಬೆಳಗ್ಗೆಯಿಂದ ಆಗಮಿಸಿ ದರ್ಶನ ಪಡೆದರು. ದೇವಾಲಯ ಆವರಣ ಭಕ್ತರಿಂದ ತುಂಬಿಕೊಂಡಿತ್ತು. ಕೆಲವು ಭಕ್ತರು ನದಿಯ ದಡ, ಪೌಳಿ, ಉದ್ಯಾನವನದಲ್ಲಿ ಕುಳಿತು ಭೋಜನ ಸವಿದರು. ಶ್ರಾವಣದ ಎರಡನೇ ಸೋಮವಾರ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸಂಗಮನಾಥನಿಗೆ 354 ರುದ್ರಾಭಿಷೇಕ, 145 ಪಂಚಾಮೃತ ಅಭಿಷೇಕ ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net