ದೇಹ, ಮನಸಿನ ಪ್ರಸನ್ನತೆಯೇ ಬದುಕಿನ ಶ್ರೀಮಂತಿಕೆ

210119 Koppal Jatre Gavishree
Published on

ಗದಗ: ಮನುಷ್ಯನಿಗೆ ದೇಹ, ಮನ, ಆತ್ಮಪ್ರಸನ್ನತೆ ಅಗತ್ಯವಿದೆ. ಶ್ರೀಮಂತಿಕೆ ಈ ಮೂರು ಪ್ರಸನ್ನತೆಯಲ್ಲಿ ಅಡಗಿದೆ ಎಂದು ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು ನುಡಿದರು.

ನಗರದ ವಿಡಿಎಸ್ ಮೈದಾನದಲ್ಲಿ ಪ್ರಕಾರ ವಚನ ಮಾಲಿಕೆಯಲ್ಲಿ ಮಾತನಾಡಿದ ಅವರು. ಜೀರ್ಣಿಸಿಕೊಳ್ಳುವ ಶಕ್ತಿ ಇರುವನು, ನೆಮ್ಮದಿಯಿಂದ ನಿದ್ದೆ ಮಾಡುವನು. ಕ್ರಿಯೆಗಳಿಗೆ ದೇಹ ಸ್ಪಂದನೆ ಇರುವ ವ್ಯಕ್ತಿಯೇ ನೈಜ ಶ್ರೀಮಂತ ಎಂದರು.

ಮನುಷ್ಯ ವಸ್ತುಗಳಲ್ಲಿ ಪ್ರೀತಿ ಹುಡುಕುತ್ತಿದ್ದಾನೆ. ಬೆಳ್ಳಿ, ಬಂಗಾರವನ್ನು ತಿಜೂರಿಯಲ್ಲಿಟ್ಟು, ಬೀಗ ಹಾಕಿ ಕೆಲಸಕ್ಕೆ ಹೋಗುತ್ತಿರುವ ಪಾಲಕರು ತಮ್ಮ ಮಕ್ಕಳ ಜವಾಬ್ದಾರಿ ಕೆಲಸದಾಕೆಗೆ ವಹಿಸಿ ನೌಕರಿಗೆ ಹೋಗುತ್ತಾರೆ. ಚಿನ್ನಾಭರಣದ ಮೇಲಿನ ಪ್ರೀತಿ ತನ್ನ ಮಕ್ಕಳ ಮೇಲೆ ತೋರುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಜನರಲ್ಲಿ ಪ್ರೀತಿ ಹುಡುಕುವುದೇ ನಿಜ ಮಾನವ ಧರ್ಮ ಎಂದು ನುಡಿದರು.

ನೀಟ್ ಪರಿಕ್ಷೆಯಲ್ಲಿ ಪಾಸಾಗುವುದು ಮುಖ್ಯವಲ್ಲ, ಜೀವನದಲ್ಲಿ ನೀಟಾಗಿ ಬದುಕುವುದು ಮುಖ್ಯ. ದೇಹ ಗಟ್ಟಿ ಇರಬೇಕು, ಮನಸಿಗೆ ಉತ್ಸಾಹ ಇರಬೇಕು, ಆತ್ಮಕ್ಕೆ ಚೈತನ್ಯ ಇರುವುದೇ ನಿಜವಾದ ಪ್ರಸನ್ನತೆ ಎಂದರು. ದೇಹದ ಜೀವಾಂಶಗಳು ಸಹಕಾರ ವ್ಯವಸ್ಥೆಗೆ ಹೊಂದಿರುತ್ತದೆ. ಅನ್ನದ ಶಕ್ತಿಯನ್ನು ಪ್ರತಿ ಜೀವಕೋಶಗಳಿಗೂ ಪೂರೈಸುತ್ತವೆ. ದೇಹದಂತ ನಿಜವಾದ ಸಹಕಾರ ವ್ಯವಸ್ಥೆ ಮತ್ತೊಂದಿಲ್ಲ ಎಂದು ಶ್ರೀಗಳು ತಿಳಿಹೇಳಿದರು.

ಡಿಜಿಟಲ್ ಉಪವಾಸ: ಮೊದಲು ವಾರಕ್ಕೊಮ್ಮೆ ಉಪವಾಸ ಮಾಡುತ್ತಿದ್ದ ಜನ ಈಗ ಡಿಜಿಟಲ್ ಉಪವಾಸಕ್ಕೆ ಒಗ್ಗಿಕೊಂಡಿದ್ದಾರೆ. ಒಂದು ದಿನ ಮೊಬೈಲ್ ಬಳಸುವುದಿಲ್ಲ. ಒಂದು ದಿನ ಟಿವಿ ನೋಡುವುದಿಲ್ಲ ಎಂದು ತಮಗೆ ತಾವೇ ಉಪವಾಸ ಮಾಡುವ ಉದಾಹರಣೆ ಕೇಳ ಸಿಗುತ್ತಿವೆ. ಇದೇ ಡಿಜಿಟಲ್ ಉಪವಾಸ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net