ನಿಸ್ವಾರ್ಥ ಸೇವೆಯಿಂದ ಸಿಗುವುದು ನೆಮ್ಮದಿ

nrp sri
ಎನ್.ಆರ್.ಪುರದಲ್ಲಿ ಮಾಜಿ ಎಂಎಲ್ಸಿ ಎಂ.ಶ್ರೀನಿವಾಸ್ ಅವರನ್ನು ಅಭಿಮಾನಿಗಳು, ವಿವಿಧ ಸಂಘಗಳಿಂದ ಸನ್ಮಾನಿಸಲಾಯಿತು. ಪಿ.ಆರ್.ಸದಾಶಿವ, ಪ್ರಶಾಂತ್ ಎಲ್. ಶೆಟ್ಟಿ, ಎಚ್.ಎಂ.ಮನು, ಸುಂದರೇಶ್, ಬಿಳಾಲುಮನೆ ಉಪೇಂದ್ರ, ಜುಬೇದಾ ಇತರರಿದ್ದರು.
Published on

ಎನ್.ಆರ್.ಪುರ: ನಿಸ್ವಾರ್ಥ ಮನಸ್ಸಿನಿಂದ ಸಮಾಜ ಸೇವೆ ಮಾಡಿದರೆ ಬದುಕಿನಲ್ಲಿ ನೆಮ್ಮದಿ ಸಿಗುವುದು ಎಂದು ಮಾಜಿ ಎಂಎಲ್ಸಿ ಎಂ.ಶ್ರೀನಿವಾಸ್ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಜೈ ಶ್ರೀ ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ 6 ಲಕ್ಷ ರೂಪಾಯಿ ಮೊತ್ತದ ಚೆಕ್ ಹಸ್ತಾಂತರ ಹಾಗೂ ಎಂ.ಶ್ರೀನಿವಾಸ್ ಅಭಿಮಾನಿಗಳ ಬಳಗ, ಚೈತನ್ಯ ಯುವಕ ಸಂಘ ಹಾಗೂ ಆಟೋ ಮಾಲೀಕರ ಮತ್ತು ಚಾಲಕರ ಸಂಘ, ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಟೋ ಚಾಲಕರು ಶ್ರಮ ಜೀವಿಗಳು. ಎಲ್ಲ ಸಂದರ್ಭದಲ್ಲೂ ಜನ ಸೇವೆ ಮಾಡುತ್ತಾರೆ. ಅವರ ಆರೋಗ್ಯಕ್ಕಾಗಿ ಏಳು ವರ್ಷದ ಹಿಂದೆ ಅವರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದ್ದೆ. ಕನ್ನಡ ರಾಜ್ಯೋತ್ಸವ ಸಮಾರಂಭ ಸಮಯದಲ್ಲಿ 1 ಲಕ್ಷ ರೂ. ನೀಡಿದ್ದೇನೆ. ಈಗ ಮತ್ತೆ 6 ಲಕ್ಷ ರೂ. ನೀಡುತ್ತಿದ್ದೇನೆ. ಅವರು ಈ ಹಣವನ್ನು ಆರೋಗ್ಯ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಎಂ.ಶ್ರೀನಿವಾಸ್ ಅವರು ಶ್ರಮಿಕ ವರ್ಗದವರ ಜತೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಿಗಮದ ಅಧ್ಯಕ್ಷ ಸ್ಥಾನ ಲಭಿಸಲಿದೆ ಎಂದರು.
ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ನಾನು ಕೆಪಿಸಿಸಿ ಸದಸ್ಯನಾಗಲು ಎಂ.ಶ್ರೀನಿವಾಸ್ ಕಾರಣ. ಹಿಂದುಳಿದ ವರ್ಗದ ನನ್ನನ್ನು ಕೆಪಿಸಿಸಿ ಸದಸ್ಯನನ್ನಾಗಿ ಮಾಡಿರುವುದು ಅವರ ವ್ಯಕ್ತಿತ್ವ ತೋರಿಸುತ್ತದೆ. ಅವರ ಪರಿಶ್ರಮದಿಂದ ತಾಲೂಕಿನ ದೇಗುಲಗಳ ಜೀರ್ಣೋದ್ಧಾರವಾಗಿದೆ ಎಂದರು.
ಎಂ.ಶ್ರೀನಿವಾಸ್ ಅಭಿಮಾನಿಗಳ ಬಳಗ, ಚೈತನ್ಯ ಯುವಕ ಸಂಘ, ಜಾಮೀಯಾ ಮಸೀದಿ, ತಾಲೂಕು ವರ್ತಕರ ಸಂಘ, ದಲಿತ ಸಂಘಟನೆಗಳು, ಶೆಟ್ಟಿಕೊಪ್ಪ ಭದ್ರಾ ಕಾಲನಿ ಗ್ರಾಮಸ್ಥರು, ಮಧು, ಇ.ಸಿ.ಜೋಯಿ, ಈಚಿಕೆರೆ ಸುಂದರೇಶ್, ಬಿಳಾಲುಮನೆ ಉಪೇಂದ್ರ, ಎಚ್.ಎಂ.ಮನು, ಜುಬೇದಾ, ಸೈಯದ್‌ವಸೀಂ, ಶೋಜ, ಗಾಂಧಿಗ್ರಾಮ ನಾಗರಾಜು, ಸುನೀಲ್, ಶ್ರೀಧರ, ವಾಸುದೇವ ಕೋಟ್ಯಾನ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net