

ಶಿರಸಿ: ಮನುಷ್ಯ ತನ್ನ ಸುಖಕ್ಕಾಗಿ, ಸಂತೋಷಕ್ಕಾಗಿ ಏನೆಲ್ಲಾ ಮಾಡುತ್ತಾನೆ, ಆದರೆ ಅದು ಸಿಗುವುದಿಲ್ಲ. ನಿಜ ಸಂತೋಷ ಬೇಕೆಂದರೆ ಭಗವಂತನ ಮೊರೆ ಹೋಗಬೇಕು ಎಂದು ದೈವಜ್ಞ ಮಠಾದೀಶ್ವರರಾದ ಪ. ಪೂ. ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ನಗರದ ಅಯೋಧ್ಯ ಕಾಲೋನಿಯ ಉದ್ಯಮಿ ಸಂತೋಷ ಸುಬ್ರಾಯ ದೈವಜ್ಞ ಇತ್ತೀಚೆಗೆ ಆಯೋಜಿಸಿದ್ದ ಧಾರ್ವಿುಕ ಕಾರ್ಯಕ್ರಮಲ್ಲಿ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಭಗವಂತ ಕೊಟ್ಟ ಸುಖ ಸಂತೋಷ ಮನುಷ್ಯನಿಗೆ ಗೊತ್ತಾಗುವುದಿಲ್ಲ, ಎಷ್ಟು ಕೊಟ್ಟರು ಮತ್ತೆ ಬೇಕು ಎನ್ನುವ ಆಸೆಗಳು ನಮ್ಮಲ್ಲಿ ಪೂರ್ತಿ ಆಗುವುದಿಲ್ಲ. ಹಾಗಿದ್ದಾಗ ಮನುಷ್ಯನಿಗೆ ಭಗವಂತ ಕೊಟ್ಟ ಸಂಪತ್ತು ಎಷ್ಟು ಕೊಟ್ಟರು ಕಾಣುವುದಿಲ್ಲ. ಇಲ್ಲಿ ನಾವೆಲ್ಲರೂ ಭಗವಂತ ಆಡಿಸಿದಂತೆ ಆಡಬೇಕು, ನಾಟಕದ ಪಾತ್ರದಾರಿಗಳು ನಾವು. ನಾವು ಎಲ್ಲಿಂದ ಬಂದೆವೋ ಅಲ್ಲಿಗೇ ಹೋಗುವುದು ಖಚಿತ. ಭಗವಂತನ ಧ್ಯಾನ ಮಾಡಿ ಅವನಿಗೆ ಮೊರೆ ಹೋದರೆ ಜೀವನ ಸಂತೋಷದಿಂದ ಕೂಡಿರುತ್ತದೆ ಎಂದರು.
ಪ್ರಿಯಾ ಮತ್ತು ಸಂತೋಷ ಸುಬ್ರಾಯ ದೈವಜ್ಞ, ಶ್ವೇತಾ ಮತ್ತು ಗಜಾನನ ಸುಬ್ರಾಯ ದೈವಜ್ಞ ದಂಪತಿ ಶ್ರೀಗಳ ಪಾದ ಪೂಜೆ ನೆರವೇರಿಸಿ, ಫಲ ಸಮರ್ಪಣೆ ಮಾಡಿದರು. ಲತಾ ರಾಯಕರ್ ಸಂಗಡಿಗರು ಪ್ರಾರ್ಥನೆ ಮಾಡಿದರು. ಉದಯಕುಮಾರ ಕಾನಳ್ಳಿ ನಿರ್ವಹಿಸಿದರು.