ಧಾರ್ಮಿಕ ಮೌಲ್ಯಗಳ ಪರಿಪಾಲನೆಯಿಂದ ಸುಖ ಶಾಂತಿ

horti 3-1
ಹೊರ್ತಿ ಸಮೀಪದ ಲೋಣಿ ಬಿ.ಕೆ. ಗ್ರಾಮದ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿದರು. ಮಾಜಿ ಶಾಸಕ ರಾಜು ಆಳಗೂರ, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು ಇದ್ದರು.
Published on

ಹೊರ್ತಿ: ಸಜ್ಜನ ಸತ್ಪುರುಷರ ಸಂಗಮದಲ್ಲಿ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳುವುದು. ಧಾರ್ಮಿಕ ಮೌಲ್ಯಗಳ ಪುನರುತ್ಥಾನ ಮತ್ತು ಪರಿಪಾಲನೆಯಿಂದ ಜೀವನದಲ್ಲಿ ಸುಖ, ಶಾಂತಿ ಪ್ರಾಪ್ತವಾಗಲಿದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.

ಸಮೀಪದ ಲೋಣಿ ಬಿ.ಕೆ. ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧೇಶ್ವರ ಮೂರ್ತಿ ಪ್ರತಿಷ್ಠಾಪನಾ ನಿಮಿತ್ತ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬದುಕು ಎಷ್ಟು ಶ್ರೀಮಂತವಾಗಿದೆ ಅನ್ನುವುದಕ್ಕಿಂತ ಎಷ್ಟು ನೆಮ್ಮದಿಯಿಂದ ಇದ್ದೇವೆ ಎಂಬುದು ಮುಖ್ಯ. ಭಾವನೆ ಒಳ್ಳೆಯದಿದ್ದರೆ ಭಾಗ್ಯ ಬೆನ್ನತ್ತಿ ಬರುತ್ತದೆ. ವಿನಯ ನಿನ್ನಲ್ಲಿದ್ದರೆ ವಿಜಯ ನಿನ್ನದಾಗುವುದರಲ್ಲಿ ಸಂದೇಹವಿಲ್ಲ. ಸಹನೆ ನಿನ್ನದಾದರೆ ಸಕಲವೂ ನಿನ್ನದಾಗುವುದೆಂದು ಪೂರ್ವಜರು ಹೇಳಿದ್ದಾರೆ. ನಿನ್ನೆ ಸುಖ ಇತ್ತೆಂದು ಇತಿಹಾಸ ಹೇಳುತ್ತದೆ. ನಾಳೆ ಸುಖ ಇರುವುದೆಂದು ವಿಜ್ಞಾನ ಹೇಳುತ್ತದೆ. ಆದರೆ, ಸತ್ಯ, ಧರ್ಮದ ಮಾರ್ಗದಲ್ಲಿ ನಡೆದರೆ ಇಂದೇ ಸುಖ ಶಾಂತಿ ದೊರಕುವುದೆಂದು ಧರ್ಮ ಹೇಳುತ್ತದೆ. ಪ್ರಾಚೀನ ಇತಿಹಾಸ ಪವಿತ್ರ ಪರಂಪರೆ ಹೊಂದಿರುವ ಶ್ರೀ ಸಿದ್ಧೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಧರ್ಮ ಸಮಾರಂಭಗಳನ್ನು ಸಂಯೋಜಿಸಿರುವುದು ತಮ್ಮೆಲ್ಲರ ಧರ್ಮ ಶ್ರದ್ಧೆಗೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಆಶೀರ್ವದಿಸಿದರು.

ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಈ ದರ್ಮಸಭೆಯಲ್ಲಿ ತಾಯಂದಿರ ಪಾತ್ರ ಬಹಳಷ್ಟು ಮುಖ್ಯವಾದುದು. ಈ ಭಾಗಕ್ಕೆ ರೈತ ನಷ್ಟದಲ್ಲಿದ್ದು, ಶೀಘ್ರ 1.2 ಟಿಎಂಸಿ ನೀರು ಹರಿಸಿ ಅನುಕೂಲ ಮಾಡಿಕೊಡಲಾಗುವುದು. ಚಡಚಣದ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು. ಚಡಚಣ ತಾಲೂಕು ಎಲ್ಲ ಸರ್ಕಾರಿ ಕಚೇರಿಗಳು ಕೆಲ ದಿನಗಳಿಂದ ಕೆಲಸವನ್ನು ಮಾಡುತ್ತೇನೆ ಎಂದರು.

ಮಾಜಿ ಶಾಸಕ ರಾಜು ಆಳಗೂರ ಮಾತನಾಡಿದರು.

ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಪಾನಮಂಗಳೂರಿನ ಶಿವಯೋಗಿ ಶಿವಾಚಾರ್ಯರು, ತದ್ದೇವಾಡಿಯ ಶ್ರೀ ಮಹಾಂತೇಶ ಮಹಾಂತೇಶ ಸ್ವಾಮೀಜಿ, ಮಾಜಿ ಶಾಸಕ ರಾಜು ಆಲಗೂರ, ಯುವ ಮುಖಂಡರಾದ ವಿಠ್ಠಲಗೌಡ ಪಾಟೀಲ, ಬಿ.ಎಂ. ಕೋರೆ, ಕೆ.ಎಸ್. ಪಾಟೀಲ, ಎಸ್.ಕೆ. ಪಾಟೀಲ, ಸಿದ್ಧೇಶ್ವರ ದೇವಸ್ಥಾನ ಕಮಿಟಿ ಸದಸ್ಯರು, ಗ್ರಾಮಸ್ಥರು ಇದ್ದರು.

ಕೆ.ಎಸ್. ಪಾಟೀಲ ಸ್ವಾಗತಿಸಿದರು. ಆರ್.ಕೆ. ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net