ಆಶಾಢ ಗಾಳಿಗೆ ರಸ್ತೆಗೆ ಬಿದ್ದ ಮರ, ಸಂಚಾರಕ್ಕೆ ಅಡಚಣೆ

28 HANUR 1 A
Published on

ಹನೂರು: ತಾಲೂಕಿನ ಹಲವೆಡೆ ಅಶಾಢ ಗಾಳಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ವಿಪರೀತ ಗಾಳಿಗೆ ಆಂಡಿಪಾಳ್ಯದ ಬಳಿ ಬೃಹತ್ ಮರವೊಂದು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಹೊಸದೊಡ್ಡಿಯಲ್ಲಿ ಮನೆಯ ಮೇಲೆ ಮರ ಹಾಗೂ ಕೆಲವೆಡೆ ವಿದ್ಯುತ್ ಕಂಬಗಳು ಬಿದ್ದು ಜನ ಜೀವನ ಏರುಪೇರಾಗಿದೆ.
ಹನೂರು ಹಾಗೂ ಕೊಳ್ಳೇಗಾಲದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾದ ಆಂಡಿಪಾಳ್ಯ ಸಮೀಪದ ಬೂದಿಪಡಗದ ಬಳಿ ಜು.22 ರಂದು ಬೃಹತ್ ಮರವೊಂದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ 3 ಗಂಟೆಗಳ ಕಾಲ ಅಡಚಣೆ ಉಂಟಾಗಿತ್ತು. ಇದರ ಬೆನ್ನಲೇ ಬೆಳಗಿನ ಜಾವ ಆಂಡಿಪಾಳ್ಯದ ಬಳಿ ಬೃಹತ್ ಗಾತ್ರದ ಮರ ರಸ್ತೆಗೆ ಬಿದ್ದು ಬೆಳಗ್ಗೆ 7.30 ರ ತನಕವೂ ಅಂತಾರಾಜ್ಯ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಾಹನಗಳು ರಸ್ತೆಯಲ್ಲೇ ಗಂಟೆಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಪರಿಣಾಮ ಪ್ರಯಾಣಿಕರು ಸಾಕಷ್ಟು ತೊಂದರೆ ಪಟ್ಟರು. ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮರ ತೆರೆವುಗೊಳಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net