ಉದ್ದನೂರು ಬಳಿ ಚಿರತೆ ಪ್ರತ್ಯಕ್ಷ

17 HANUR 2
Published on

ಹನೂರು: ತಾಲೂಕಿನ ಉದ್ದನೂರು ಗ್ರಾಮದ ಬಳಿ ಶುಕ್ರವಾರ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಬೀತರಾಗಿದ್ದಾರೆ.

ಬೆಳಗ್ಗೆ 8.30ರಲ್ಲಿ ಗ್ರಾಮದ ಮುಖ್ಯ ರಸ್ತೆ ಬದಿ ಚಿರತೆ ನೋಡಿದ ಗ್ರಾಮಸ್ಥರು, ಕೂಡಲೇ ಅರಣ್ಯ ಇಲಾಖೆಗೆ ತಿಳಿಸಿದರು. ಸ್ಥಳಕ್ಕಾಗಮಿಸಿದ ಡಿಆರ್‌ಎ್ಒ ಸಾಲನ್ ಹಾಗೂ ಸಿಬ್ಬಂದಿ ಪರಿಶೀಲಿಸಿದರು. ಸುತ್ತಮುತ್ತ ಹುಡುಕಾಟ ನಡೆಸಿದಾಗ ಯಾವುದೇ ಹೆಜ್ಜೆ ಗುರುತು ಪತ್ತೆಯಾಗಲಿಲ್ಲ. ಆತಂಕಪಡುವ ಆತಂಕವಿಲ್ಲ. ಧೈರ್ಯದಿಂದ ಇರುವಂತೆ ಗ್ರಾಮಸ್ಥರಿಗೆ ತಿಳಿಹೇಳಿದರು. ರಾತ್ರಿ ವೇಳೆ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net