ಮಕ್ಕಳಿಗೆ ಹೂ ನೀಡಿ ಶಾಲೆಗೆ ಸ್ವಾಗತ

31 HANUR 2
Published on

ಹನೂರು: ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ತಾಲೂಕಿನ ಪಿ.ಜಿ. ಪಾಳ್ಯ ಅನುದಾನಿತ ನಿರ್ಮಲ ಶಾಲೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಆರತಿ ಬೆಳಗಿಸಿ, ಗುಲಾಬಿ ಹೂ ನೀಡುವುದರ ಮೂಲಕ ಬರಮಾಡಿಕೊಂಡರು.

ಶಾಲೆ ಆರಂಭದ ಅಂಗವಾಗಿ ಶಾಲೆಯನ್ನು ತಳಿರು, ತೋರಣದಿಂದ ಸಿಂಗರಿಸಲಾಗಿತ್ತು. ಶಾಲಾ ದಾಖಲಾತಿ ಆಂದೋಲನಕ್ಕೆ ಗ್ರಾಪಂ ಸಂತೋಷ್‌ಕುಮಾರ್ ಚಾಲನೆ ನೀಡಿದರು. ಶಾಲಾ ವ್ಯವಸ್ಥಾಪಕ ಫಾದರ್ ವಿನ್ಸೆಂಟ್, ಗ್ರಾಪಂ ಅಧ್ಯಕ್ಷ ಸಂತೋಷ್‌ಕುಮಾರ್, ಸದಸ್ಯ ಕೃಷ್ಣಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಕ್ಮಲ್, ರೈತ ಸಂಘದ ಗ್ರಾಮ ಘಟಕದ ಉಪಾಧ್ಯಕ್ಷ ಪ್ರಭುಸ್ವಾಮಿ, ಗ್ರಾಮ ಅರಣ್ಯ ಸಮಿತಿ ಕಾರ್ಯದರ್ಶಿ ಲಿಂಗರಾಜು, ಅರಣ್ಯ ರಕ್ಷಕ ಚಂದ್ರಶೇಖರ್, ಮುಖ್ಯ ಶಿಕ್ಷಕರಾದ ಸಗಾಯರಾಜ್, ಅಪೋಲಿನ್ ಮೋರಾಸ್ ಹಾಗೂ ಶಿಕ್ಷಕರು ಗ್ರಾಮದ ಬಡಾವಣೆಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ದಾಖಲಾತಿ ಆಂದೋಲನ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net