ಕೇರೆ ಹಾವು ರಕ್ಷಣೆ

24 HANUR 9
Published on

ಹನೂರು: ತಾಲೂಕಿನ ರಾಮಾಪುರ ಹಳೆಯ ಪೊಲೀಸ್ ಠಾಣೆಯಲ್ಲಿ ಗುರುವಾರ ಕಾಣಿಸಿಕೊಂಡ ಕೇರೆ ಹಾವನ್ನು ಸ್ನೇಕ ಮಧು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು.

ನೂತನವಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಹಳೇ ಪೊಲೀಸ್ ಠಾಣೆಯಲ್ಲಿ ಕೇರೆ ಹಾವು ಕಾಣಿಸಿಕೊಂಡಿತ್ತು. ಇನ್ಸ್‌ಪೆಕ್ಟರ್ ಮನೋಜ್‌ಕುಮಾರ್ ಅವರು ಸ್ನೇಕ್ ಮಧು ಅವರಿಗೆ ಮಾಹಿತಿ ತಿಳಿಸಿದರು. ಸ್ಥಳಕ್ಕಾಗಮಿಸಿ ಮಧು ಸುರಕ್ಷಿತವಾಗಿ ಹಾವನ್ನು ಹಿಡಿದು ಮಲೆಮಹದೇಶ್ವರ ವನ್ಯಜೀವಿ ವಲಯದ ಅರಣ್ಯ ಪ್ರದೇಶಕ್ಕೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net