ರೈತನ ಹಣ ಲಪಟಾಯಿಸಿದ ಖದೀಮ

IMG-20240520-WA0110
Published on

ಹನೂರು: ಎಟಿಎಂನಲ್ಲಿ ಹಣ ತೆಗೆದುಕೊಡುವ ವೇಳೆ ಖದೀಮನೊಬ್ಬ ರೈತನನ್ನು ವಂಚಿಸಿ 61 ಸಾವಿರ ರೂ. ನಗದು ಲಪಟಾಯಿಸಿದ್ದಾನೆ.

ತಾಲೂಕಿನ ಕುರಟ್ಟಿಹೊಸೂರು ಗ್ರಾಮದ ರೈತ ಬಸವರಾಜು ವಂಚನೆಗೊಳಗಾಗಿ ಹಣ ಕಳೆದುಕೊಂಡವರು. ಸೋಮವಾರ ಪಟ್ಟಣದ ಕೆನರಾ ಬ್ಯಾಂಕ್‌ನ ಎಟಿಎಂಗೆ ಆಗಮಿಸಿ ನನಗೆ ಹಣ ಪಡೆಯಲು ಗೊತ್ತಿಲ್ಲ. ಹಣ ತೆಗೆದುಕೊಳ್ಳಲು ಸಹಾಯ ಮಾಡಿ ಎಂದು ಬಸವರಾಜು ಅಪರಿಚಿತ ವ್ಯಕ್ತಿಯೊಬ್ಬನನ್ನು ಕೇಳಿದ್ದಾನೆ. ಈ ವೇಳೆ ಆತ 5 ಸಾವಿರ ರೂ. ತೆಗೆದುಕೊಟ್ಟಿದ್ದಾನೆ. ನಂತರ ಖದೀಮ ತನ್ನ ಬಳಿಯಿದ್ದ ಎಟಿಎಂ ಕೊಟ್ಟು ರೈತನ ಎಟಿಎಂ ಪಡೆದು 61 ಸಾವಿರ ರೂ. ನಗದು ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಅನುಮಾನಗೊಂಡು ಎಟಿಎಂ ಮೂಲಕ ಖಾತೆಯನ್ನು ಪರಿಶೀಲಿಸಿದಾಗ ರೈತ ಹಣ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ.

ಈ ಸಂಬಂಧ ಬಸವರಾಜು ಹನೂರು ಪೊಲೀಸ್ ಠಾಣೆಗೆ ದೂರು ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೆನರಾ ಬ್ಯಾಂಕ್‌ಗೆ ತೆರಳಿ ಸಿಸಿಟಿವಿ ಪರಿಶೀಲಿಸಿದಾಗ ವಂಚಿಸಿರುವುದು ತಿಳಿದು ಬಂದಿದೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net